ADVERTISEMENT

ಏ.22ರಂಂದು ಎಸ್‌.ಐ.ಟಿಯಲ್ಲಿ ಸಂಶೋಧನೆ ಮಾದರಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 15:13 IST
Last Updated 20 ಏಪ್ರಿಲ್ 2019, 15:13 IST

ತುಮಕೂರು: ನಗರದ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ( ಎಸ್.ಐ.ಟಿ) ಭಾರತೀಯ ತಾಂತ್ರಿಕ ವಿದ್ಯಾ ಸಂಸ್ಥೆ (ಐ.ಎಸ್.ಟಿ.ಇ) ವಿದ್ಯಾರ್ಥಿ ಅಧ್ಯಾಯದ ಆಶ್ರಯದಲ್ಲಿ ಸಂಶೋಧನೆಗಳ ಮಾದರಿ ಪ್ರದರ್ಶನವನ್ನು(ಪ್ರಾಜೆಕ್ಟ್‌ಗಳ) ಸೋಮವಾರ (ಏ.22) ಆಯೋಜಿಸಲಾಗಿದೆ.

ಬೆಳಿಗ್ಗೆ 11 ಗಂಟೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕರಿಸಿದ್ದಪ್ಪನವರ ಉದ್ಘಾಟಿಸಲಿದ್ದಾರೆ. ಈ ಪ್ರದರ್ಶನದಲ್ಲಿ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಎಲ್ಲ ವಿಭಾಗಗಳ ಅತ್ಯುತ್ತಮ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಗುವುದು ಎಂದು ಪ್ರಾಂಶುಪಾಲರಾದ ಡಾ.ಕೆ.ಪಿ.ಶಿವಾನಂದ ತಿಳಿಸಿದ್ದಾರೆ.

ಸಾರ್ವಜನಿಕರು, ಪ್ರೌಢ ಶಾಲೆ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಪ್ರದರ್ಶನ ದಿನದಂದು ಎಸ್‌.ಐ.ಟಿಯ ಎಲ್ಲ ವಿಭಾಗಗಳ ಪ್ರಯೋಗ ಶಾಲೆಗಳನ್ನು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ವೀಕ್ಷಣೆ ಮಾಡಬಹುದು. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.