ADVERTISEMENT

ಪಾವಗಡ | ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲೂ ನಕಲು?

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 4:21 IST
Last Updated 26 ಮಾರ್ಚ್ 2024, 4:21 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪಾವಗಡ: ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿಯೂ ಕೆಲ ಪರೀಕ್ಷಾ ಕೇಂದ್ರ‌ಗಳಲ್ಲಿ ನಕಲು ನಡೆದಿರುವ ಬಗ್ಗೆ ಆರೋಪ ಕೇಳಿ ಬಂದಿದೆ.

ಪಟ್ಟಣದ ವೆಂಕಟೇಶ್ವರ ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾವನ್ನು ವಿದ್ಯಾರ್ಥಿಯೊಬ್ಬ ಭಾನುವಾರ ಸಂಜೆ ಪರೀಕ್ಷಾ ಕೊಠಡಿ, ನೋಂದಣಿ ಸಂಖ್ಯೆ ನೋಡುವ ನೆಪದಲ್ಲಿ ವಿದ್ಯಾರ್ಥಿನಿಯರೊಂದಿಗೆ ಕೇಂದ್ರವನ್ನು ಪ್ರವೇಶಿಸಿ ಆಕ್ರೋಶದಿಂದ ಮುರಿದು ಹಾಕಿದ್ದಾನೆ.

ADVERTISEMENT

ತಾಲ್ಲೂಕಿನ ಸಿ.ಕೆ ಪುರ ಪರೀಕ್ಷಾ ಕೇಂದ್ರದಲ್ಲಿ ಅರ್ಧ ಗಂಟೆ ಕಾಲ ವಿದ್ಯುತ್ ಸ್ಥಗಿತಗೊಂಡಿತ್ತು. ಈ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮೆರಾ ಸ್ಥಗಿತಗೊಂಡ ಸಮಯದಲ್ಲಿ ನಕಲು ಎಂದು ಆರೋಪಿಸಲಾಗಿದೆ.

ನಾಗಲಮಡಿಕೆ ಹೋಬಳಿ ತಿರುಮಣಿ ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯ ಸೆರೆಯಾಗದ ಸ್ಥಳದಲ್ಲಿ ನಿಂತು ಶಿಕ್ಷಕರು ಇಂತಹ ಪ್ರಶ್ನೆಗೆ ಇಂತಹ ಉತ್ತರ ಎಂದು ಕೂಗಿ ಹೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.