ADVERTISEMENT

ತುಮಕೂರು ಶೈಕ್ಷಣಿಕ ಜಿಲ್ಲೆಗೆ ‘ಬಿ’ ಫಲಿತಾಂಶ

ಕುಣಿಗಲ್‌ನ ಜ್ಞಾನಭಾರತಿ ಪ್ರೌಢಶಾಲೆಯ ಜಿ.ಎಂ.ಮಹೇಶ್ ಜಿಲ್ಲೆಗೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 14:11 IST
Last Updated 10 ಆಗಸ್ಟ್ 2020, 14:11 IST

ತುಮಕೂರು: ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ‘ಬಿ’ ಗ್ರೇಡ್ ಸ್ಥಾನಕ್ಕೆ ಭಾಜನವಾಗಿದೆ. ಈ ಬಾರಿ ರ‍್ಯಾಂಕಿಂಗ್ ನೀಡದೆ ಗ್ರೇಡ್ ಕೊಡಲಾಗಿದೆ.

ಕುಣಿಗಲ್‌ನ ಜ್ಞಾನಭಾರತಿ ಪ್ರೌಢಶಾಲೆಯ ಜಿ.ಎಂ.ಮಹೇಶ್, 625ಕ್ಕೆ 624 ಅಂಕ ಪಡೆಯುವ ಮೂಲಕ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದಾರೆ. ಅಲ್ಲದೆ ರಾಜ್ಯ ಮಟ್ಟದಲ್ಲಿಯೂ ಜಿಲ್ಲೆಯ ಸಾಧನೆಯನ್ನು ಎತ್ತಿ ಹಿಡಿದಿದ್ದಾರೆ.

ಚಿಕ್ಕನಾಯಕನಹಳ್ಳಿಯ ರೋಟರಿ ಪ್ರೌಢಶಾಲೆಯ ಡಿ.ಆರ್.ಹರ್ಷಿತಾ (620), ತುಮಕೂರಿನ ಮಾರುತಿ ವಿದ್ಯಾ ಕೇಂದ್ರದ ಎನ್.ಹರಿಣಿ (619), ತುಮಕೂರಿನ ವಿದ್ಯಾನಿಧಿ ಶಾಲೆಯ ಜಿ.ಸಿ.ಎನ್.ಶ್ರೀನಿಧಿ (619), ಕುಣಿಗಲ್‌ನ ಅರವಿಂದ ಅಂತರರಾಷ್ಟ್ರೀಯ ಶಾಲೆಯ ಎ.ಆರ್.ರಕ್ಷಿತಾ (619) ಜಿಲ್ಲೆಯಲ್ಲಿ ಹೆಚ್ಚು ಅಂಕ ಪಡೆದಿದ್ದಾರೆ. ಈ ಎಲ್ಲ ಶಾಲೆಗಳು ಅನುದಾನ ರಹಿತ ಶಾಲೆಗಳಾಗಿವೆ.

ADVERTISEMENT

ಸರ್ಕಾರಿ ಶಾಲೆಯಲ್ಲಿ ಪ್ರಥಮ: ತುರುವೇಕೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಡಿ.ಸಿಂಚನ 618 ಅಂಕ, ತಿಪಟೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರೌಢಶಾಲಾ ವಿಭಾಗದ ಎಚ್‌.ಸಿ.ದೀಪಿಕಾ 617, ಕುಣಿಗಲ್‌ ತಾಲ್ಲೂಕು ಹುಲಿಯೂರುದುರ್ಗದ ಕರ್ನಾಟಕ ಪಬ್ಲಿಕ್ ಶಾಲೆಯ ಕೆ.ಎಸ್.ಶಾಲಿನಿ 616 ಅಂಕ ಪಡೆಯುವ ಮೂಲಕ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಅಂಕ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕು ‘ಎ’ ಫಲಿತಾಂಶ ಪಡೆದಿದೆ. ಚಿಕ್ಕನಾಯಕನಹಳ್ಳಿ, ಗುಬ್ಬಿ, ಕುಣಿಗಲ್, ತಿಪಟೂರು, ತುರುವೇಕೆರೆ ತಾಲ್ಲೂಕು ‘ಬಿ’ ಗ್ರೇಡ್ ಫಲಿತಾಂಶವನ್ನು ಗಳಿಸಿವೆ.

ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ 190 ಶಾಲೆಗಳು ‘ಎ’, 167 ಶಾಲೆಗಳು ‘ಬಿ’ ಮತ್ತು 101 ಶಾಲೆಗಳು ‘ಸಿ’ ಫಲಿತಾಂಶ ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.