ADVERTISEMENT

ತುಮಕೂರು: ತಪಾಸಣೆ ವೇಳೆ ಬೇಜವಾಬ್ದಾರಿ ತೋರಿದ್ದ ಸಿಬ್ಬಂದಿ ಅಮಾನತು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 11:37 IST
Last Updated 21 ಮಾರ್ಚ್ 2020, 11:37 IST

ತುಮಕೂರು: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾನರ್‌ಗೆ ಒಳಪಡಿಸುವಾಗ ಆರೋಗ್ಯ ಇಲಾಖೆಯ ಸಿಬ್ಬಂದಿ ನರಸಿಂಹಮೂರ್ತಿ ಬೇಜವಾಬ್ದಾರಿ ‍ಪ್ರದರ್ಶಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಅವರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಿಕಾ ಅಮಾನತುಗೊಳಿಸಿದ್ದಾರೆ.

ಪ್ರಯಾಣಿಕರು ಸರದಿಯಲ್ಲಿ ನಿಂತು ತಪಾಸಣೆಗೆ ಒಳಪಟ್ಟರೆ ಸಿಬ್ಬಂದಿ ಆರಾಮಾಗಿ ಖುರ್ಚಿಯಲ್ಲಿ ಕುಳಿತು ಫೋನ್‌ನಲ್ಲಿ ಮಾತನಾಡುತ್ತ ಬೇಕಾಬಿಟ್ಟಿಯಾಗಿ ನರಸಿಂಹಮೂರ್ತಿ ತಪಾಸಣೆ ನಡೆಸಿದ್ದಾರೆ. ಅವರ ವರ್ತನೆ ಉಡಾಫೆಯಾಗಿತ್ತು. ಈ ವಿಡಿಯೊ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT