ADVERTISEMENT

ದಮನಿತರಿಗೆ ಅಕ್ಷರ ಕಲಿಸಿದ ತಾಯಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 6:06 IST
Last Updated 4 ಜನವರಿ 2022, 6:06 IST
ತುಮಕೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಸಾವಿತ್ರಿ ಬಾಯಿ ಫುಲೆ ಜನ್ಮ ದಿನ ಆಚರಿಸಲಾಯಿತು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಾಧರ್, ಪಾಲಿಕೆ ಸದಸ್ಯೆ ಗಿರಿಜಾ, ಕಾಲೇಜು ಪ್ರಾಚಾರ್ಯ ಎಸ್‌.ರಾಜಕುಮಾರ್‌, ಉಪನ್ಯಾಸಕರಾದ ರಾಧಾಕೃಷ್ಣ, ಆರ್‌.ಬಿ. ಗಂಗಾಧರ, ದಸ್ತಗಿರಿ ಸಾಬ್‌, ಮುಖಂಡ ಧನಿಯಾಕುಮಾರ್ ಇದ್ದರು

ತುಮಕೂರು: ಅಕ್ಷರ ಕಲಿಯಲು ವರ್ಣ ಹಾಗೂ ಲಿಂಗದ ಪ್ರಾಮುಖ್ಯತೆ ಇದ್ದ ಕಾಲಘಟ್ಟದಲ್ಲಿಯೇ ದಮನಿತ ವರ್ಗದ ಮಹಿಳೆಯರಿಗೆ ಅಕ್ಷರ ಜ್ಞಾನ ಮೂಡಿಸಿದವರು ಸಾವಿತ್ರಿ ಬಾಯಿ ಫುಲೆ ಎಂದುಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಾಧರ್ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾವಿತ್ರಿ ಬಾಯಿ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸಮಾಜದ ವಿರುದ್ಧ ಹೋರಾಡಿದ ಮೊದಲಿಗರು. ಅವರ ಹೋರಾಟದ ಫಲವಾಗಿ ಇಂದು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಹಲವು ಸಮುದಾಯಗಳ ವಿರೋಧದ ಮಧ್ಯೆ ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದರು ಎಂದು ತಿಳಿಸಿದರು.

ADVERTISEMENT

ಮಹಾನಗರ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್‌, ‘ಸ್ವಾತಂತ್ರ್ಯ ಪೂರ್ವದಲ್ಲಿಯೇ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಶ್ರಮಿಸಿ, ಶಾಲೆಯನ್ನು ತೆರೆದ ಅಕ್ಷರದವ್ವ. ಭಾರತದ ಮೊಟ್ಟ ಮೊದಲ ಶಿಕ್ಷಕಿ. ಸಮಾಜದ ವಿರೋಧದ ನಡುವೆ ಮಹಿಳೆಯರಿಗೆ ಶಿಕ್ಷಣದ ಹಕ್ಕು ಕೊಡಿಸಲು, ಮಹಿಳಾ ಸಬಲೀಕರಣಕ್ಕೆ ಫುಲೆ ಶ್ರಮಿಸಿದವರು ಎಂದು ಹೇಳಿದರು.

ಕಾಲೇಜು ಪ್ರಾಚಾರ್ಯ ಎಸ್‌.ರಾಜಕುಮಾರ್‌, ಉಪನ್ಯಾಸಕರಾದ ರಾಧಾಕೃಷ್ಣ, ಆರ್‌.ಬಿ.ಗಂಗಾಧರ, ದಸ್ತಗಿರಿಸಾಬ್‌, ಹರೀಶ್‌, ಶ್ರೀಧರ್, ಪಾಂಡುರಂಗರಾವ್‌, ಪುಷ್ಪಾವತಿ, ವೀಣಾ, ಕೆ.ನಾಗರಾಜು, ಮುಖಂಡ ಧನಿಯಾಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.