ADVERTISEMENT

ವರ್ಷದಲ್ಲಿ ಬದಲಾದ ಬನ್ನಿಹಳ್ಳಿ ಕೆರೆಯ ಚಿತ್ರಣ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 16:52 IST
Last Updated 18 ಆಗಸ್ಟ್ 2020, 16:52 IST
ಹೂಳು ತೆಗೆದು ಹಸ್ತಾಂತರಕ್ಕೆ ಸಿದ್ಧಗೊಂಡಿರುವ ಬನ್ನಿಹಳ್ಳಿ ಕೆರೆ
ಹೂಳು ತೆಗೆದು ಹಸ್ತಾಂತರಕ್ಕೆ ಸಿದ್ಧಗೊಂಡಿರುವ ಬನ್ನಿಹಳ್ಳಿ ಕೆರೆ   

ತಿಪಟೂರು: ತಾಲ್ಲೂಕಿನ ತಡಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಿಹಳ್ಳಿ ಕೆರೆಯ ಹೂಳು ತೆಗೆಯಲಾಗಿದ್ದು, ಹೆಚ್ಚು ನೀರು ಸಂಗ್ರಹವಾಗುವ ಭರವಸೆ ಮೂಡಿದೆ.

13 ಎಕರೆ 25 ಗುಂಟೆ ವಿಸ್ತೀರ್ಣ ಹೊಂದಿರುವ ಕೆರೆಯನ್ನು ₹10 ಲಕ್ಷ ವೆಚ್ಚದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ‘ನಮ್ಮ ಊರು- ನಮ್ಮ ಕೆರೆ’ ಯೋಜನೆಯಡಿ ಹೂಳು ತೆಗೆಯಲಾಗಿದೆ.

ಈ ಯೋಜನೆಗೆ ಗ್ರಾಮಸ್ಥರೂ ಕೈಜೋಡಿಸಿದರು. ಕೆರೆಯ ಹೂಳು ತೆಗೆದು ಸುತ್ತಲೂ ಸಸಿಗಳನ್ನು ನೆಟ್ಟಿದ್ದು ಹಸಿರಿನಿಂದ ಕಂಗೊಳಿಸುತ್ತಿದೆ.

ADVERTISEMENT

‘ನೀರಿನ ಸಂರಕ್ಷಣೆಗೆ ಸಂಸ್ಥೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಖುಷಿಯ ವಿಚಾರ. ಅಂತರ್ಜಲ ವೃದ್ಧಿಯ ಜತೆಗೆ ಬರಗಾಲದಲ್ಲಿಯೂ ಪ್ರಾಣಿ, ಪಕ್ಷಿಗಳ ದಾಹ ನೀಗಿಸಲು ಕೆರೆ-ಕಟ್ಟೆಗಳನ್ನು ಅಭಿವೃದ್ಧಿ ಪಡಿಸಿ ನೀರು ನಿಲ್ಲುವಂತೆ ಮಾಡಿರುವುದು ಶ್ಲಾಘನೀಯ ಕಾರ್ಯ’ ಎಂದು ಕೆರೆಗೋಡಿ ರಂಗಾಪುರ ಮಠದ ಗುರುಪರದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.

‘ಉತ್ತಮ ಕೆರೆಗಳನ್ನು ಆಯ್ಕೆ ಮಾಡಿಕೊಂಡು ಸ್ಥಳೀಯರ ಸಹಕಾರದಿಂದಲೇ ಅಭಿವೃದ್ಧಿಗೆ ಮುಂದಾಗುತ್ತೇವೆ. ಇದರಿಂದ ತಮ್ಮ ಶ್ರಮದ ಪ್ರತಿಫಲದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ತಾಲ್ಲೂಕು ಯೋಜನಾಧಿಕಾರಿ ಶಾಂತ ನಾಯಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.