ADVERTISEMENT

ಗುಬ್ಬಿ ತಹಶೀಲ್ದಾರ್‌ ಬಿ. ಆರತಿ ಮನೆಯಲ್ಲಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 10:03 IST
Last Updated 25 ಜೂನ್ 2022, 10:03 IST

ತುಮಕೂರು: ತಹಶೀಲ್ದಾರ್ ವಸತಿ ಗೃಹದಲ್ಲಿ ಕಳ್ಳರು ಕೈಚಳಕ ತೋರಿರುವ ಘಟನೆ ಗುಬ್ಬಿ ಪಟ್ಟಣದಲ್ಲಿ ಶನಿವಾರ ಹಾಡಹಗಲೇ ನಡೆದಿದೆ.

4ನೇ ಶನಿವಾರ ರಜೆಯ ಪ್ರಯುಕ್ತ ಗುಬ್ಬಿಯ ತಹಶೀಲ್ದಾರ್‌ ಬಿ.ಆರತಿ ಊರಿಗೆ ತೆರಳಿದ್ದರು. ಇದೇ ಸಮಯ ನೋಡಿಕೊಂಡ ಕಳ್ಳರು ಮನೆಯ ಬೀಗ ಮುರಿದು ಒಳ ನುಗ್ಗಿದ್ದಾರೆ. ಮನೆಯಲ್ಲಿ ಯಾವೆಲ್ಲಾ ವಸ್ತುಗಳು ಮತ್ತು ಎಷ್ಟು ನಗದು ಕಳ್ಳತನವಾಗಿದೆ ಎಂಬುವುದರ ಕುರಿತು ಇನ್ನೂ ಮಾಹಿತಿ ತಿಳಿದು ಬಂದಿಲ್ಲ.

ಕಳ್ಳತನದ ವಿಷಯ ತಿಳಿದ ಕೂಡಲೇ ತಹಶೀಲ್ದಾರ್‌ ವಾಪಸ್‌ ಬರುತ್ತಿದ್ದು, ಅವರು ಬಂದ ನಂತರ ಸಂಪೂರ್ಣ ಮಾಹಿತಿ ದೊರೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.