ತುಮಕೂರು: ಗುಬ್ಬಿ ತಾಲ್ಲೂಕಿನ ನಿಟ್ಟೂರು ಹಾಗೂ ಸಂಪಿಗೆ ರೈಲು ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ 62ರಲ್ಲಿ ಕಾಮಗಾರಿ ಕೈಗೊಂಡಿದ್ದು, ಕೆಲವು ರೈಲುಗಳ ಸಂಚಾರ ರದ್ದು, ಕೆಲವು ಮಾರ್ಗ ಬದಲಾವಣೆ ಮಾಡಲಾಗಿದೆ.
ಸಂಚಾರ ರದ್ದು: ಜುಲೈ 18 ಹಾಗೂ 25ರಂದು ತುಮಕೂರು– ಚಾಮರಾಜನಗರ, ಚಾಮರಾಜನಗರ– ಮೈಸೂರು, ಚಾಮರಾಜನಗರ– ಯಶವಂತಪುರ, ಯಶವಂತಪುರ– ಚಾಮರಾಜನಗರ, ತುಮಕೂರು– ಕೆಎಸ್ಆರ್ ಬೆಂಗಳೂರು, ಕೆಎಸ್ಆರ್ ಬೆಂಗಳೂರು– ತುಮಕೂರು, ಯಶವಂತಪುರ– ಶಿವಮೊಗ್ಗ ಟೌನ್, ಶಿವಮೊಗ್ಗ ಟೌನ್– ಯಶವಂತಪುರ ರೈಲುಗಳ ಸಂಚಾರವನ್ನು ರದ್ದು ಪಡಿಸಲಾಗಿದೆ.
ಭಾಗಶಃ ರದ್ದು: ಜುಲೈ 18 ಹಾಗೂ 25ರಂದು ಕೆಎಸ್ಆರ್ ಬೆಂಗಳೂರು– ತುಮಕೂರು ನಿಲ್ದಾಣಗಳ ನಡುವೆ ಸಂಚರಿಸುವ ರೈಲುಗಳನ್ನು ಹಿರೇಹಳ್ಳಿ– ತುಮಕೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ತಾಳಗುಪ್ಪ– ಕೆಎಸ್ಆರ್ ಬೆಂಗಳೂರು, ಕೆಎಸ್ಆರ್ ಬೆಂಗಳೂರು– ಧಾರವಾಡ– ಕೆಎಸ್ಆರ್ ಬೆಂಗಳೂರು ರೈಲುಗಳನ್ನು ಅರಸೀಕೆರೆ– ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದು ಮಾಡಲಾಗಿದೆ.
ಮಾರ್ಗ ಬದಲಾವಣೆ: ಜುಲೈ 17 ಹಾಗೂ 24ರಂದು ವಾಸ್ಕೋಡಗಾಮಾ– ಯಶವಂತಪುರ ರೈಲು ಅರಸೀಕೆರೆ, ಹಾಸನ, ನೆಲಮಂಗಲ ಮಾರ್ಗದಲ್ಲಿ ಸಂಚರಿಸಲಿದೆ. ಹೀಗಾಗಿ ತಿಪಟೂರು, ತುಮಕೂರು ಮೂಲಕ ಸಂಚರಿಸುವುದಿಲ್ಲ.
ಜುಲೈ 18 ಹಾಗೂ 25ರಂದು ಹೊರಡುವ ಮೈಸೂರು– ವಾರಾಣಸಿ, ಯಶವಂತಪುರ– ಜೈಪುರ, ಮೈಸೂರು– ಬೆಳಗಾವಿ ರೈಲು ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದಲ್ಲಿ ಸಂಚರಿಸಲಿವೆ. ಮೈಸೂರು– ಉದಯಪುರ ಸಿಟಿ ರೈಲು ಕೆಎಸ್ಆರ್ ಬೆಂಗಳೂರು, ನೆಲಮಂಗಲ, ಹಾಸನ, ಅರಸೀಕೆರೆ, ದಾವಣಗೆರೆ ಮೂಲಕ ಸಂಚರಿಸಲಿದೆ.
ರೈಲುಗಳ ನಿಯಂತ್ರಣ: ಜುಲೈ 16 ಹಾಗೂ 23ರಂದು ಬೆಳಗಾವಿ– ಮೈಸೂರು ರೈಲು 55 ನಿಮಿಷ, ಚಾಮರಾಜನಗರ– ತುಮಕೂರು ರೈಲನ್ನು 120 ನಿಮಿಷ ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತದೆ.
ಸಮಯ ಮರುನಿಗದಿ: ಜುಲೈ 18 ಹಾಗೂ 25ರಂದು ಯಶವಂತಪುರ– ವಾಸ್ಕೋಡಗಾಮಾ ರೈಲು ಯಶವಂತಪುರದಿಂದ 60 ನಿಮಿಷ, ಜುಲೈ 24ರಂದು ತುಮಕೂರು– ಶಿವಮೊಗ್ಗ ಟೌನ್ ರೈಲು ತುಮಕೂರಿನಿಂದ 85 ನಿಮಿಷ ತಡವಾಗಿ ಹೊರಡಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.