ಶಿರಾ: ತಾಲ್ಲೂಕಿನ ಕಿಲಾರದಹಳ್ಳಿ ತಾಂಡಾದಲ್ಲಿ ತುಳಜಾ ಭವಾನಿ, ಕಾಳಿಕಾಂಬ, ಮಹಾಲಕ್ಷ್ಮಿ ಆರತಿ ಉತ್ಸವ ನಡೆಯಿತು.
ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರ ನಾಯ್ಕ ಮಾತನಾಡಿ, ತಾಂಡಾದಲ್ಲಿ ನಡೆದ ಶಕ್ತಿ ದೇವತೆ ತುಳಜಾ ಭವಾನಿ ಉತ್ಸವ ಎಲ್ಲರನ್ನೂ ಒಗ್ಗೂಡಿಸುವುದರ ಜೊತೆಗೆ ಪರಸ್ಪರ ಸ್ನೇಹ ಬಾಂಧವ್ಯಗಳನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿ. ಶ್ರದ್ದೆ, ಭಕ್ತಿ, ಮುಗ್ಧ ಮನಸ್ಸಿನಿಂದ ತುಳಜಾ ಭವಾನಿಯನ್ನು ಆರಾಧಿಸಿ ಪೂಜಿಸಿದರೆ ಭಕ್ತರ ಇಷ್ಟಾರ್ಥ ಸಿದ್ಧಿಸಲಿದೆ ಎಂದು ಹೇಳಿದರು.
ತುಳಜಾ ಭವಾನಿ ದೇವಿಗೆ ಮಹಿಳೆಯರು ಆರತಿ ಉತ್ಸವ ನೆರವೇರಿಸಿದರು.
ಪೂಜಾರ್ ರವಿ ನಾಯ್ಕ, ಗಂಗಾಧರ ನಾಯ್ಕ, ಬಾಬುನಾಯ್ಕ, ನಾನ್ಯನಾಯ್ಕ, ಬೆಸ್ಕಾಂ ಇಇ ಕುಮಾರ್ ನಾಯ್ಕ, ಶಿರಾ ನಗರ ಯುವ ಅಧ್ಯಕ್ಷ ಅಂಜನ್ ಕುಮಾರ್, ಪೊಲೀಸ್ ಹಾಮ್ಯನಾಯ್ಕ, ರಂಗನಾಯ್ಕ, ರವಿನಾಯ್ಕ, ಕಾಗದಿನಾಯ್ಕ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.