ADVERTISEMENT

ತುಮಕೂರು: ಮಕ್ಕಳ ಹಕ್ಕುಗಳ ಗ್ರಾಮ ಸಭೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:55 IST
Last Updated 14 ಡಿಸೆಂಬರ್ 2025, 6:55 IST
ಶಿರಾ ತಾಲ್ಲೂಕಿನ ಅಗ್ರಹಾರ ಗ್ರಾಮದಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಯಿತು
ಶಿರಾ ತಾಲ್ಲೂಕಿನ ಅಗ್ರಹಾರ ಗ್ರಾಮದಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಯಿತು   

ಶಿರಾ: ತಾಲ್ಲೂಕಿನ ಅಮಲಗೊಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ದೊಡ್ಡ ಮರಗಳಿದ್ದು ಅವುಗಳ ಕೊಂಬೆ ಒಣಗಿದ್ದು ಯಾವ ಸಮಯದಲ್ಲಿ ಬೇಕಾದರೂ ವಿದ್ಯಾರ್ಥಿಗಳ ಮೇಲೆ ಬೀಳುವ ಸಾಧ್ಯತೆ ಇದ್ದು ತಕ್ಷಣ ತೆರವುಗೊಳಿಸುವಂತೆ ವಿದ್ಯಾರ್ಥಿ ಧನುಷಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒತ್ತಾಯಿಸಿದರು.

ತಾಲ್ಲೂಕಿನ ಅಗ್ರಹಾರ ಗ್ರಾಮದ ಅಗ್ರಹಾರದಮ್ಮನ ದೇವಸ್ಥಾನದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಮಕ್ಕಳು ಸಮಸ್ಯೆಯನ್ನು ಹೇಳಿದರು.

ಮಕ್ಕಳು ತಮ್ಮ ಕೌಶಲ ಅಭಿವೃದ್ಧಿಗಾಗಿ ವಾರದಲ್ಲಿ ಎರಡು ದಿನ ಕಂಪ್ಯೂಟರ್ ತರಗತಿ ನಡೆಸಬೇಕು. ಶಾಲೆ ಮುಂಭಾಗದಲ್ಲಿ ಚರಂಡಿ, ಕುಡಿಯುವ ನೀರು, ಆಟದ ಮೈದಾನ, ಅಕ್ಷರ ದಾಸೋಹ ಕೊಠಡಿ, ಕ್ರೀಡಾ ಸಾಮಗ್ರಿ, ಶಾಲಾ ಕೊಠಡಿ, ಕಾಂಪೌಂಡ್ ದುರಸ್ತಿ, ಶೌಚಾಲಯ ಅವ್ಯವಸ್ಥೆಯ ಬಗ್ಗೆ ಪ್ರಶ್ನೆ ಮಾಡಿದರು.

ADVERTISEMENT

ನವ್ಯದಿಶ ಸಂಸ್ಥೆಯ ಪ್ರೋಗ್ರಾಮ್ ಅಸೋಸಿಯೇಟ್ ಸಿ.ಎಂ.ಎಸ್.ಗೌಡ ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಕ್ಕಳ ಹಕ್ಕುಗಳಲ್ಲಿ ಒಂದಾದ ಭಾಗವಹಿಸುವಿಕೆಯ ಹಕ್ಕನ್ನು ಪ್ರೋತ್ಸಾಹಿಸುವುದಕ್ಕಾಗಿ ಹಾಗೂ ಮಕ್ಕಳ ಮೂಲ ಸೌಕರ್ಯ, ರಕ್ಷಣೆಯ ಕುರಿತ ವಿಚಾರಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜತೆ ಸೇರಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮಕ್ಕಳ ಹಕ್ಕುಗಳ ಸಭೆ ನಡೆಸಲಾಗುತ್ತಿದೆ ಎಂದರು.

ಗ್ರಾ.ಪಂ ಅಧ್ಯಕ್ಷ ಕೆ.ಎಲ್.ಗಂಗಣ್ಣ, ಉಪಾಧ್ಯಕ್ಷೆ ಗೀತಾ ಗೋವಿಂದರಾಜು, ಪಿಡಿಒ ಲೋಕೇಶ್, ಚಿಗುರು ಯುವಜನ ಸಂಘದ ಅಧ್ಯಕ್ಷ ಅಮಲಗೊಂದಿ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಶಿಧರ್, ಶ್ರೀದೇವಿ, ಸಿ.ಆರ್.ಪಿ ಪದ್ಮಜಾ, ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಘನಾ, ಜನಾರ್ದನ್ ಜೆ.ಎಸ್, ಕೆಂಪಣ್ಣ, ಭವ್ಯ.ಎನ್, ಅಂಬಿಕ ಎನ್, ಕಿರಣ್, ಕೆಂಪರಾಜು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.