ADVERTISEMENT

ದಾನಿಗಳಿಂದ ಅಗತ್ಯ ವಸ್ತುಗಳ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 13:12 IST
Last Updated 1 ಏಪ್ರಿಲ್ 2020, 13:12 IST

ತುಮಕೂರು: ಜಿಲ್ಲೆಯಲ್ಲಿರುವ ವಲಸೆ ಕೂಲಿ ಕಾರ್ಮಿಕರು, ಬೀದಿ ಬದಿ ಕಾರ್ಮಿಕರು ಹಾಗೂ ದೈನಂದಿನ ಜೀವನ ನಡೆಸಲು ಶಕ್ತಿ ಇಲ್ಲದವರಿಗೆ ಊಟ, ಉಪಾಹಾರ ಒದಗಿಸುವ ಸಲುವಾಗಿ ದಾನಿಗಳಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

ನಗರದ ಅಶೋಕ ರಸ್ತೆಯಲ್ಲಿರುವ ರೆಡ್‍ಕ್ರಾಸ್ ಕಟ್ಟಡದ ಕಚೇರಿಯಲ್ಲಿ ದಾನಿಗಳಿಂದ ಅಗತ್ಯ ವಸ್ತುಗಳನ್ನು ಸ್ವೀಕರಿಸಲಾಗುವುದು. ಸ್ವೀಕರಿಸಿದ ವಸ್ತುಗಳಿಗೆ ದಾಖಲೆ ನೀಡಲಾಗುವುದು.

ದಾನಿಗಳಿಂದ ಅಕ್ಕಿ, ಗೋಧಿ, ಗೋಧಿಹಿಟ್ಟು, ರವೆ, ಬೇಳೆ ಮತ್ತು ಕಾಳುಗಳು, ಅಡಿಗೆ ಎಣ್ಣೆ, ಉಪ್ಪಿನ ಪ್ಯಾಕೆಟ್, ಸಣ್ಣ ಸಾಂಬಾರ್, ಮಸಾಲೆ ಪುಡಿ ಪ್ಯಾಕೆಟ್ ಬಿಸ್ಕತ್, ಬಳಸದೆ ಇರುವ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್, ಸೋಪ್, ಟೂತ್ ಪೇಸ್ಟ್ ಹಾಗೂ ಹಾಲಿನ ಪುಡಿಯನ್ನು ಮಾತ್ರ ಸ್ವೀಕರಿಸಲಾಗುವುದು. ಈ ವಸ್ತುಗಳನ್ನು ಹೊರತುಪಡಿಸಿ ಬೇರೆ ವಸ್ತುಗಳನ್ನು ಸ್ವೀಕರಿಸಲಾಗುವುದಿಲ್ಲ.

ADVERTISEMENT

ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡ ಬಯಸುವವರಿಂದ ಚೆಕ್ ಅಥವಾ ಡಿಡಿ ಸ್ವೀಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪ್ರೊ.ಕೆ.ಚಂದ್ರಣ್ಣ 9900622993, ಸಾಗರನಹಳ್ಳಿ ಪ್ರಭು 8971690433, ಶಿವಕುಮಾರ್ 9886520465, ಸುರೇಂದ್ರ ಷಾ 9243592002, ವಿಜಯಕುಮಾರ್ 9480306483, ಚೇತನ್ 9901426309 ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.