ADVERTISEMENT

ತುಮಕೂರು: ಇವಿಎಂ-ವಿವಿಪ್ಯಾಟ್ ಹೊತ್ತು ಮತಗಟ್ಟೆಗಳ ಕಡೆ ತೆರಳಿದ ಚುನಾವಣಾ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 14:04 IST
Last Updated 25 ಏಪ್ರಿಲ್ 2024, 14:04 IST
ಮತಯಂತ್ರಗಳೊಂದಿಗೆ ಮತಗಟ್ಟೆಗಳ ಕಡೆ ಹೊರಟ ಚುನಾವಣಾ ಸಿಬ್ಬಂದಿ
ಮತಯಂತ್ರಗಳೊಂದಿಗೆ ಮತಗಟ್ಟೆಗಳ ಕಡೆ ಹೊರಟ ಚುನಾವಣಾ ಸಿಬ್ಬಂದಿ   

ಚಿಕ್ಕನಾಯಕನಹಳ್ಳಿ: ಪಟ್ಟಣದ ಸರ್ಕಾರಿ ಪದವಿಪೂರ್ವ ಶಿಕ್ಷಣ ಕಾಲೇಜಿನ ಸ್ಟ್ರಾಂಗ್ ರೂಮ್‌ನಲ್ಲಿ ಚುನಾವಣಾ ಪೂರ್ವ‌ ತರಬೇತಿ ಪಡೆದ ಚುನಾವಣೆ ಸಿಬ್ಬಂದಿ, ಅವರಿಗೆ ನಿಗದಿಯಾದ ಮತಗಟ್ಟೆ ಕಡೆಗೆ ಗುರುವಾರ ಮಧ್ಯಾಹ್ನ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳೊಂದಿಗೆ ಹೆಜ್ಜೆ ಹಾಕಿದರು.

ತಾಲ್ಲೂಕು ಕೇಂದ್ರದಿಂದ ಮಧ್ಯಾಹ್ನ ಹೊರಟ ಚುನಾವಣಾ ಸಿಬ್ಬಂದಿ ಅದೇ ದಿನ ಸಂಜೆಯೊಳಗೆ ತಮಗೆ ನಿಗದಿಯಾದ ಮತಗಟ್ಟೆಗಳಿರುವ ಊರುಗಳ ಸರ್ಕಾರಿ ಶಾಲೆಗಳನ್ನು ಸೇರಿಕೊಳ್ಳಬೇಕಿದೆ.

ಚುನಾವಣಾ ಸಿಬ್ಬಂದಿ ರಾತ್ರಿ ತಂಗಲಿರುವ ಶಾಲೆಗಳ ಬಳಿ ಭದ್ರತೆ ಹಾಗೂ ಅವರಿಗೆ ಅಗತ್ಯ ಊಟ-ಉಪಹಾರಗಳ ವ್ಯವಸ್ಥೆ ಮಾಡಲಾಗಿದೆ.

ADVERTISEMENT
ತಾಲ್ಲೂಕು ಕ್ರೀಡಾಂಗಣದಲ್ಲಿ ಚುನಾವಣಾ ಸಿಬ್ಬಂದಿಗಳ ಪ್ರಯಾಣಕ್ಕೆ ಸಜ್ಜಾಗಿ ನಿಂತಿರುವ ಸರ್ಕಾರಿ ಬಸ್‌ಗಳು
ಪ್ರಯಾಣಕ್ಕೆ ಸಜ್ಜಾಗಿ ನಿಂತ ವಾಹನಗಳು
ಖಾಕಿಯಲ್ಲಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ
ಚುನಾವಣಾ ಸಿಬ್ಬಂದಿ ಪ್ರಯಾಣಕ್ಕೆ ಸಜ್ಜುಗೊಂಡು ನಿಂತಿರುವ ಕೆಎಸ್ಸಾರ್ಟಿಸಿ ವಾಹನಗಳು
ಕೆಎಸ್ಸಾರ್ಟಿಸಿ ಬಸ್ಸು
ಮತಯಂತ್ರಗಳೊಂದಿಗೆ ಚುನಾವಣಾ ಸಿಬ್ಬಂದಿ
ಮತಗಟ್ಟೆಗಳ ಕಡೆ ಹೊರಡುವ ಭರದಲ್ಲಿ ಚುನಾವಣಾ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.