ADVERTISEMENT

ತುರುವೇಕೆರೆ | ಹೊನ್ನಾದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 2 ಮೇ 2025, 14:16 IST
Last Updated 2 ಮೇ 2025, 14:16 IST
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೊನ್ನಾದೇವಿ ಜಾತ್ರೆ ಅಂಗವಾಗಿ ರಥೋತ್ಸವ ನಡೆಯಿತು
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೊನ್ನಾದೇವಿ ಜಾತ್ರೆ ಅಂಗವಾಗಿ ರಥೋತ್ಸವ ನಡೆಯಿತು   

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಗ್ರಾಮದೇವತೆ ಹೊನ್ನಾದೇವಿ ಜಾತ್ರೆ ಅಂಗವಾಗಿ ಶುಕ್ರವಾರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ದೇವಸ್ಥಾನದಿಂದ ಹೊನ್ನಾದೇವಿಯನ್ನು ಬಸವನ ನಗಾರಿ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಕರೆತಂದು ರಥಕ್ಕೆ ಕೂರಿಸಿ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.

ರಥದ ನಾಲ್ಕು ಚಕ್ರ ಹಾಗೂ ಮುಂಭಾಗದಲ್ಲಿ ಪೂಜೆ ಸಲ್ಲಿಸಿ ಉಗ್ಗೆದನ್ನವನ್ನು ನೈವೇದ್ಯ ಮಾಡಿ ದೇವಿಗೆ ಮಂಗಳಾರತಿ ನಡೆಸಿದರು. ಸಾವಿರಾರು ಭಕ್ತರು ದೇವಿಯ ಜಯಘೋಷದೊಂದಿಗೆ ರಥ ಎಳೆದರು. ಹರಕೆ ಈಡೇರಿಸುವಂತೆ ಭಕ್ತಾಧಿಗಳು ಧವನ ಮತ್ತು ಬಾಳೆ ಹಣ್ಣನ್ನು ರಥಕ್ಕೆ ತೂರಿದರು. ಚಂದ್ರಮಂಡಲೊತ್ಸವ ನೆರವೇರಿತು.

ADVERTISEMENT

ಗ್ರಾಮದ ಮಹಿಳೆಯರು, ಹೆಣ್ಣು ಮಕ್ಕಳು ಸರತಿ ಸಾಲಿನಲ್ಲಿ ಬಾಯಿಬೀಗ ಹಾಕಿಸಿಕೊಂಡರು. ಶನಿವಾರ ರಾತ್ರಿ ದೂಪದ ಸೇವೆ ಸಲ್ಲಿಸಿ, ಕಂಬ ವಿಸರ್ಜನೆ ಮಾಡಿದ ಮೇಲೆ ಜಾತ್ರೆಗೆ ತೆರೆ ಎಳೆಯಲಾಗುತ್ತದೆ.

ಭಕ್ತರಿಗೆ ಪಾನಕ, ಫಲಹಾರ, ಮಜ್ಜಿಗೆ ವಿತರಿಸಿದರು. ಅನ್ನದಾಸೋಹ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ಸಂಜೆವರೆಗೆ ಪ್ರಸಾದ ಸ್ವೀಕರಿಸಿದರು. ಹೊನ್ನಾದೇವಿಯ 33 ಹಳ್ಳಿಗಳ ಭಕ್ತರು ಪಾಲ್ಗೊಂಡಿದ್ದರು.

ದೇವಾಲಯದ ಧರ್ಮದರ್ಶಿ ಡಿ.ಎಸ್.ಗಂಗಾಧರ ಗೌಡ, ಗುಡಿಗೌಡ ಡಿ.ಎನ್.ಸಿದ್ದೇಗೌಡ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೊನ್ನಾದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ರಥೋತ್ಸವ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.