ADVERTISEMENT

ಚಿಕ್ಕನಾಯಕನಹಳ್ಳಿ | ಮರಕ್ಕೆ ಕಾರು ಡಿಕ್ಕಿ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 4:57 IST
Last Updated 21 ಅಕ್ಟೋಬರ್ 2019, 4:57 IST
   

ತುಮಕೂರು:ಚಿಕ್ಕನಾಯಕನಹಳ್ಳಿ ತಾಲ್ಲೂಕು ಜೆ.ಸಿ.ಪುರ ಬಳಿ ಭಾನುವಾರ ರಾತ್ರಿ ಮರಕ್ಕೆ ಕಾರು ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ದರ್ಶನ್ (23), ಭರತ್ (22) ಮೃತರು. ಈ ಪೈಕಿದರ್ಶನ್ ಎಂಬುವವರು ಹುಳಿಯಾರಿನ ಬಸ್ ಏಜೆಂಟ್ ಕೋಳಿ ರಾಜಣ್ಣ ಅವರ ಮಗನಾಗಿದ್ದು, ಭರತ್ ಎಂಬುವವರುರಾಜಣ್ಣ ಅವರ ಅಕ್ಕನ ಮಗನಾಗಿದ್ದಾನೆ.

ಮೈಸೂರಿನಲ್ಲಿ ಭಾನುವಾರ ಸಂಬಂಧಿಕರ ಮದುವೆ ಮುಗಿಸಿಕೊಂಡು ಕಾರಿನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.