ADVERTISEMENT

ಉತ್ಸವ ಮೂರ್ತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 3:58 IST
Last Updated 27 ಅಕ್ಟೋಬರ್ 2020, 3:58 IST
ಗಿಡದ ಕೆಂಚನಹಳ್ಳಿಯಲ್ಲಿ ಶಮೀ ವೃಕ್ಷದ ಸುತ್ತ ನೆರೆದಿರುವ ಗ್ರಾಮಸ್ಥರು
ಗಿಡದ ಕೆಂಚನಹಳ್ಳಿಯಲ್ಲಿ ಶಮೀ ವೃಕ್ಷದ ಸುತ್ತ ನೆರೆದಿರುವ ಗ್ರಾಮಸ್ಥರು   

ಹುಲಿಯೂರುದುರ್ಗ: ವಿಜಯದಶಮಿ ದಿನವಾಗಿ ಸೋಮವಾರ ಪಟ್ಟಣವೂ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮದೇವತೆಯ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಿತು. ಯಶಸ್ಸು, ಸಂಪತ್ತು, ಶಾಂತಿ, ಸಮೃದ್ಧಿಗಾಗಿ ಬನ್ನಿ ಮುರಿಯುವ ಕಾರ್ಯಕ್ರಮ ಆಚರಿಸಲಾಯಿತು.

ಪಟ್ಟಣ ಹಾಗೂ ಹಳೇವೂರಿನ ಹುಲಿಯೂರಮ್ಮ, ತಾವರೆಕೆರೆ ಕೋಟೆ ವರದಾಂಜನೇಯ ಸ್ವಾಮಿ, ಉಜ್ಜನಿ ಹಾಗೂ ಹಂಗರಹಳ್ಳಿ ಚೌಡೇಶ್ವರಿ, ಕೊಡವತ್ತಿ ಕದಲೇ ವೆಂಕಟರಮಣ ಸ್ವಾಮಿ, ಗಿಡದ ಕೆಂಚನಹಳ್ಳಿ, ಹೇರೋಹಳ್ಳಿ, ಬ್ಯಾಡರಹಳ್ಳಿಯ ಗ್ರಾಮದೇವತೆಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಬನ್ನಿ ಪೂಜೆ ಮಾಡಲಾಯಿತು.

ತಮಗೆ ವಿತರಿಸಿದ ಶಮೀ ಪತ್ರೆಗಳನ್ನು ಜನರು ಭಕ್ತಿಪೂರ್ವಕವಾಗಿ ಸ್ವೀಕರಿಸಿ ತಮ್ಮ ಮುಡಿಗೇರಿಸಿಕೊಂಡು ದೇವರನ್ನು ಪ್ರಾರ್ಥಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.