ADVERTISEMENT

‘ನಾವು ಜಾಹೀರಾತು ಗೊಂಬೆಗಳಲ್ಲ’

ಸಮವಸ್ತ್ರ ಹಿಂದಿರುಗಿಸಿ ಅಂಗನವಾಡಿ ಸಿಬ್ಬಂದಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 3:39 IST
Last Updated 7 ನವೆಂಬರ್ 2021, 3:39 IST
ಅಂಗನವಾಡಿ ನೌಕರರ ಸಂಘದ ತಿಪಟೂರು ತಾಲ್ಲೂಕು ಘಟಕದಿಂದ ಇಲಾಖೆ ಸಿಬ್ಬಂದಿ ಚಿದಾನಂದ್‍ಗೆ ಮನವಿ ಸಲ್ಲಿಸಲಾಯಿತು. ಮಮತಾ, ಸುಜಾತ, ಅಧ್ಯಕ್ಷೆ ಬಿ.ಎಸ್.ಅನಸೂಯ, ಕಾರ್ಯದರ್ಶಿ ಬಿ.ಎಸ್.ಶೈಲಾ, ಖಜಾಂಚಿ ಎಂ.ಜಿ.ಗಾಯತ್ರಿ, ಮರುಳ ಸಿದ್ದಮ್ಮ ಇದ್ದರು
ಅಂಗನವಾಡಿ ನೌಕರರ ಸಂಘದ ತಿಪಟೂರು ತಾಲ್ಲೂಕು ಘಟಕದಿಂದ ಇಲಾಖೆ ಸಿಬ್ಬಂದಿ ಚಿದಾನಂದ್‍ಗೆ ಮನವಿ ಸಲ್ಲಿಸಲಾಯಿತು. ಮಮತಾ, ಸುಜಾತ, ಅಧ್ಯಕ್ಷೆ ಬಿ.ಎಸ್.ಅನಸೂಯ, ಕಾರ್ಯದರ್ಶಿ ಬಿ.ಎಸ್.ಶೈಲಾ, ಖಜಾಂಚಿ ಎಂ.ಜಿ.ಗಾಯತ್ರಿ, ಮರುಳ ಸಿದ್ದಮ್ಮ ಇದ್ದರು   

ತಿಪಟೂರು: ‘ಅಂಗನವಾಡಿ ನೌಕರರನ್ನು ಪೋಷಣ ಅಭಿಯಾನದ ಪ್ರಚಾರದ ಗೊಂಬೆಗಳಂತೆ ಬಳಸಿಕೊಳ್ಳಲು ಬ್ಯಾನರ್‌ನಂತಹ ಸೀರೆಗಳನ್ನು ವಿತರಣೆ ಮಾಡಲಾಗಿದೆ’ ಎಂದು ಆರೋಪಿಸಿದ ಕರ್ನಾಟಕ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯ ಬಳಿ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದಿಂದ ಶನಿವಾರ ಪ್ರತಿಭಟನೆಯನ್ನು ನಡೆಸಿ ಇಲಾಖೆಯ ಸಿಬ್ಬಂದಿ ಚಿದಾನಂದ್‍ಗೆ ಮನವಿ ಸಲ್ಲಿಸಿದರು.

ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಬಿ.ಎಸ್.ಅನಸೂಯ ಮಾತನಾಡಿ, ಅಂಗನವಾಡಿ ನೌಕರರು ಪೋಷಣ ಅಭಿಯಾನವನ್ನು 2019ರಿಂದ ಯಶಸ್ವಿ
ಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಇಲಾಖೆಯಿಂದ ಕಳೆದ ವಾರ ಅಭಿಯಾನಕ್ಕೆ ಸಮವಸ್ತ್ರವಾಗಿ ಸೀರೆ ವಿತರಿಸಿದ್ದಾರೆ. ಆದರೆ ಈ ಸೀರೆ ಬ್ಯಾನರ್‌
ನಂತೆ ಇದ್ದು, ಸೀರೆಯ ತುಂಬೆಲ್ಲಾ ಪೋಷಣ ಅಭಿಯಾನ ಎಂದು ಮುದ್ರಿಸಿ
ದ್ದಾರೆ. ಅಂಗನವಾಡಿ ನೌಕರರನ್ನು ಜಾಹೀರಾತು ಗೊಂಬೆಗಳಂತೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಆದ್ದರಿಂದ ಇಂತಹ ಸಮವಸ್ತ್ರ ಬಳಸದೇ ಇಲಾಖೆಗೆ ಹಿಂದಿರುಗಿಸಲು ನಿರ್ಧಾರ ಕೈಗೊಂಡಿದ್ದೇವೆ ಎಂದರು.

ADVERTISEMENT

ಮುಂದಿನ ಸೋಮವಾರದಿಂದ ಯಾರೂ ಇಲಾಖೆ ನೀಡಿರುವ ಸಮವಸ್ತ್ರ ಧರಿಸದೆ ನಮ್ಮ ಸೀರೆಗಳನ್ನು ತೊಟ್ಟು ಕಾರ್ಯನಿರ್ವಹಣೆ ಮಾಡುತ್ತೇವೆ. ಇಲಾಖೆಯಿಂದ ನಿವೃತ್ತರಾಗಿರುವ ನೌಕರರಿಗೆ ನೀಡಬೇಕಾದ ಗೌರವಧನ ನೀಡದೆ ಅಲೆಸುತ್ತಿದ್ದಾರೆ. ಇಲಾಖೆಯ ಕಾರ್ಯನಿರ್ವಹಣೆ ಸಮರ್ಪಕವಾಗಿ ನಿರ್ವಹಿಸುತ್ತಿದ್ದು, ಇಲಾಖೆಯ ಸೌಕರ್ಯಗಳನ್ನು ಜನರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ. ಆದರೆ ಸಮವಸ್ತ್ರ ವಿಚಾರದಲ್ಲಿ ಇಲಾಖೆ ತ್ವರಿತ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.

ಕಾರ್ಯದರ್ಶಿ ಬಿ.ಎಸ್.ಶೈಲಾ ಮಾತನಾಡಿ, ತಾಲ್ಲೂಕಿನಲ್ಲಿ ಚುನಾವಣೆ ಶಾಖೆಯಿಂದ ಅಂಗನವಾಡಿಯ 64 ನೌಕರರನ್ನು ಬಿಎಸ್‌ಒಗಳನ್ನಾಗಿ ನೇಮಿಸಿಕೊಂಡು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಈಗಾಗಲೇ ಅಂಗನವಾಡಿ ನೌಕರರಿಗೆ ಹೆಚ್ಚಿನ ಕಾರ್ಯ ಒತ್ತಡ ಇರುವುದರಿಂದ ಕರ್ತವ್ಯ ನಿರ್ವಹಣೆ ಕಷ್ಟವಾಗುತ್ತದೆ. ನವೆಂಬರ್‌ 8ರಿಂದ ಅಂಗನವಾಡಿಗಳಿಗೆ ಮಕ್ಕಳ ಕರೆತರಲು ಆದೇಶ ದೊರೆತಿದ್ದು ಹೆಚ್ಚಿನ ಜವಾಬ್ದಾರಿ ಬರುತ್ತದೆ. ಆದ್ದರಿಂದ ತಾಲ್ಲೂಕು ಆಡಳಿತ ಕೂಡಲೇ ಎಲ್ಲ ಅಂಗನವಾಡಿ ನೌಕರರನ್ನು ಬಿಎಲ್‌ಒ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರ ಸಂಘದ ಖಜಾಂಚಿ ಎಂ.ಜಿ.ಗಾಯತ್ರಿ, ಮಮತಾ, ಸುಜಾತ, ಮರುಳಸಿದ್ಧಮ್ಮ, ಟಿ.ಆರ್.ಭಾರತಿ, ಎನ್.ಮಹಾಲಕ್ಷ್ಮಮ್ಮ, ಎಚ್.ಎಂ.ವೀಣಾ, ಲಲಿತಾ ಕೆ.ಆರ್., ಎ.ಎನ್. ಚೇತನಾ, ಮಂಜುಳ, ಹೇಮಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.