ADVERTISEMENT

ಬಯಲುಸೀಮೆಗೆ ಬಂದ ಕಾಡುಕೋಣ

​ಪ್ರಜಾವಾಣಿ ವಾರ್ತೆ
Published 10 ಮೇ 2019, 13:11 IST
Last Updated 10 ಮೇ 2019, 13:11 IST
ವೈ.ಎನ್.ಹೊಸಕೋಟೆ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಕಾಣುಕೋಣವೊಂದು ಬಂದು ಜನರಲ್ಲಿ ಅಚ್ಚರಿ ಮೂಡಿಸಿತು
ವೈ.ಎನ್.ಹೊಸಕೋಟೆ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಕಾಣುಕೋಣವೊಂದು ಬಂದು ಜನರಲ್ಲಿ ಅಚ್ಚರಿ ಮೂಡಿಸಿತು   

ವೈ.ಎನ್.ಹೊಸಕೋಟೆ (ಪಾವಗಡ ತಾ): ಬಯಲುಸೀಮೆಯ ಈ ಪ್ರದೇಶಕ್ಕೆ ಶುಕ್ರವಾರದಂದು ಕಾಣುಕೋಣವೊಂದು ಬಂದು ಜನರಲ್ಲಿ ಅಚ್ಚರಿ ಮೂಡಿಸಿತು.

ಗ್ರಾಮದ ಹೊರವಲಯದ ತೋಟವೊಂದರಲ್ಲಿ ನೀರಿನ ತೊಟ್ಟಿಯ ಬಳಿಗೆ ಹೋಗುತ್ತಿದ್ದಾಗ ಜನರಿಗೆ ಕಂಡುಬಂದಿದೆ.

ಅನಿರೀಕ್ಷಿತ ಅತಿಥಿಯನ್ನು ನೋಡಲು ಜನರು ಹತ್ತಿರ ಹೋಗಿದ್ದಾರೆ. ಆದರೆ, ಅದರ ಮೈಕಟ್ಟು ಮತ್ತು ಓಡಾಟವನ್ನು ನೋಡಿ ಹೆದರಿ ದೂರದಲ್ಲೇ ನಿಂತು ವೀಕ್ಷಿಸಿದರು. ಕೆಲವೇ ನಿಮಿಷಗಳಲ್ಲಿ ಕಾಡುಕೋಣ ತೋಟಗಳ ಮಧ್ಯೆ ತೂರಿ ಅಲ್ಲಿಂದ ಹೊರಟು ಹೋಗಿದೆ.

ADVERTISEMENT

ಈ ಪ್ರದೇಶದಲ್ಲಿ ಎಂದೂ ಕಾಡೆಮ್ಮೆಗಳು ಕಾಡುಕೋಣಗಳು ಕಂಡುಬಂದಿಲ್ಲ. ಇದು ಬಹುಶಃ ದಾರಿ ತಪ್ಪಿ ಈ ಕಡೆ ಬಂದಿರಬೇಕು ಎಂದು ರೈತರು ಮಾತಾಡಿಕೊಂಡರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.