ಶಿರಾ: ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಭಾನುವಾರ ಭಕ್ತರು ರಾಮ ನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಶ್ರೀರಾಮ, ಆಂಜನೇಯ ದೇವಾಲಯ ಸೇರಿದಂತೆ ಹಲವು ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಜ್ಯೋತಿನಗರದಲ್ಲಿರುವ ರಾಮ ಮಂದಿರ, ಗವಿ ಆಂಜನೇಯ, ಸಾಕ್ಷಿ ಆಂಜನೇಯ, ನಾಯಕರಹಟ್ಟಿಯಲ್ಲಿರುವ ಆಂಜನೇಯ, ಪಂಚಮುಖಿ ಆಂಜನೇಯ, ಕೋಟೆ ಆಂಜನೇಯ, ಸಂತೆಪೇಟೆ ಮಾರುತಿ ದೇವಾಲಯ, ಬಿಲ್ವ ಗಣೇಶ ಆಂಜನೇಯ, ಖಾಸಗಿ ಬಸ್ ನಿಲ್ದಾಣದಲ್ಲಿರುವ ಆಂಜನೇಯ ದೇವಾಲಯಗಳಲ್ಲಿ ಪಂಚಾಭಿಷೇಕ ನಡೆಸಿ ವಿಶೇಷ ಪೂಜೆ ನಡೆಸಲಾಯಿತು.
ಭಕ್ತರು ಬೆಳಿಗ್ಗೆಯಿಂದಲೇ ವಿಶೇಷವಾಗಿ ರಾಮ ಹಾಗೂ ಅಂಜನೇಯ ಸ್ವಾಮಿ ದೇವಾಲಯಗಳಿಗೆ ತೆರಳಿ ದೇವರಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೇವಾಲಯಗಳಲ್ಲಿ ಭಕ್ತರಿಗೆ ಹೆಸರು ಬೇಳೆ ಕೋಸಂಬರಿ ಹಾಗೂ ಪಾನಕ ವಿತರಿಸಲಾಯಿತು.
ಜೆಡಿಎಸ್ ಮುಖಂಡ ಆರ್.ಉಗ್ರೇಶ್ ಜ್ಯೋತಿನಗರದ ರಾಮಮಂದಿರದಲ್ಲಿ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.