ADVERTISEMENT

ನೀರಿನ ತೊಟ್ಟಿಗೆ ಬಿದ್ದು ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 6:52 IST
Last Updated 5 ಡಿಸೆಂಬರ್ 2023, 6:52 IST
   

ಕೊರಟಗೆರೆ: ಕುಡಿದ ಅಮಲಿನಲ್ಲಿದ್ದ ಯುವಕ ಜಮೀನಿನಲ್ಲಿ ನಿರ್ಮಿಸಲಾಗಿದ್ದ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಕಾಮರಾಜನಹಳ್ಳಿಯಲ್ಲಿ ಸೋಮವಾರ ನಡೆದಿದೆ.

ಪಾವಗಡ ಪಟ್ಟಣದ ಕುಂಬಾರ ಬೀದಿ ಮೂಲದ ಹನುಮಂತರಾಯಪ್ಪ ಎಂಬುವರ ಮಗ ಅಭಿರಾಮ್ (23) ಮೃತ ಯುವಕ.

ಸೋಮವಾರ ಬೆಳಿಗ್ಗೆ ಯುವಕ ತೋಟದ ಬಳಿ ನಿರ್ಮಿಸಿದ್ದ ತೊಟ್ಟಿಯ ದಡದಲ್ಲಿ ಮದ್ಯ ಸೇವಿಸಿ ಕುಡಿದ ಮತ್ತಿನಲ್ಲಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಕೆ.ಪಿ.ಅನಿಲ್, ಪಿಎಸ್ಐ ಆರ್.ಪಿ. ಅನಿಲ್ ಭೇಟಿ ನೀಡಿದ್ದರು.

ADVERTISEMENT

ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.