ಉಡುಪಿ: ಎನ್‌ಸಿ ಯೂತ್‌ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್, ಅಂಬಲಪಾಡಿ ರೋಟರಿ ಕ್ಲಬ್ ಹಾಗೂ ಅಂಬಲಪಾಡಿ ರೋಟರಿ ಗ್ರಾಮೀಣ ದಳದ ಸಹ ಯೋಗದಲ್ಲಿ ಅಂಬಲಪಾಡಿ- ಬಂಕೇರ್ ಕಟ್ಟದಲ್ಲಿ ಇತ್ತೀಚೆಗೆ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಅಂಬಲಪಾಡಿ ರೋಟರಿ ಅಧ್ಯಕ್ಷ ರೂಪೇಶ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂಬಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಕೆ. ಸಾಲಿಯಾನ್, ಎನ್‌ಸಿ ಯೂತ್‌ಸ್ಪೋರ್ಟ್ಸ್ ಅಂಡ್ ಕಲ್ಚ ರಲ್ ಕ್ಲಬ್‌ನ ಅಧ್ಯಕ್ಷ ನವೀನ್ ಸುವರ್ಣ, ಗೌರವಾಧ್ಯಕ್ಷ ಕೇಳು ನಾರಾಯಣ, ನಿವೃತ್ತ ಪ್ರಾಂಶುಪಾಲ ಸೀತಾರಾಮ ಶೆಟ್ಟಿ, ರೋಟರಿ ಮಾಜಿ ಅಧ್ಯಕ್ಷರಾದ ಎ. ಶಿವ ಕುಮಾರ್, ರವಿರಾಜ್ ಕಿದಿಯೂರು, ಜಗದೀಶ್ ಆಚಾರ್ಯ ಕಪ್ಪೆಟ್ಟು, ರಾಮ ರಾಜ್ ಕಿದಿಯೂರು, ರೋಟರಿ ಗ್ರಾಮೀ ಣ ದಳ ಅಧ್ಯಕ್ಷ ಯತೀಶ್ ಸುವರ್ಣ, ಕೆ. ಮಂಜಪ್ಪ ಸುವರ್ಣ, ಸರಸ್ವತಿ ಕೇಶವ ಶ್ರೀಯಾನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.