ADVERTISEMENT

ಅದೃಷ್ಟ ಠೇವಣಿ:ನಾಗೂರು ಸಂಘ ಪ್ರಥಮ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 9:04 IST
Last Updated 10 ಏಪ್ರಿಲ್ 2013, 9:04 IST

ಉಪ್ಪುಂದ (ಬೈಂದೂರು) : ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು ಆಯೋಜಿಸಿದ್ದ ಠೇವಣಿ ಮೇಲಿನ  ಅದೃಷ್ಟ ಬಹುಮಾನ ಯೋಜನೆಯ ಆಯ್ಕೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಉಪ್ಪುಂದದ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಜನರಲ್ಲಿ ಉಳಿತಾಯ ಪ್ರವೃತ್ತಿ ಪ್ರೋತ್ಸಾಹಿಸಲು ಸಂಘ ಈ ಯೋಜನೆ ಕೈಗೊಂಡಿತು. ಇದು ಸಾಕಷ್ಟು ಜನರನ್ನು ಪ್ರೇರೇಪಿಸಿತಲ್ಲದೆ, ಸಂಘದ ಠೇವಣಿ ವೃದ್ಧಿಗೂ ಕಾರಣವಾಯಿತು ಎಂದು ಹೇಳಿದರು. 

ನಾಗೂರಿನ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವು ಮೊದಲ ಬಹುಮಾನ ಹೀರೋ ಹೊಂಡಾ ಬೈಕ್ ಅನ್ನು ಪಡೆದುಕೊಂಡಿತು. ಹಿರಿಯಣ್ಣ ಶೆಟ್ಟಿ ದ್ವಿತೀಯ ಬಹುಮಾನವಾದ ಟಿವಿಎಸ್ ಸ್ಕೂಟಿ ಪಡೆದರು. ಯು. ಬಾಲಚಂದ್ರ ಬಳೆಗಾರ್, ಎನ್. ಸೀತಾ ಬಾಯಿ, ಎಂ.ರಾಘವೇಂದ್ರ ಭಟ್, ಬಿ.ರಾಮಕೃಷ್ಣ ಭಟ್, ಕೆ.ಜಾನಕಿ ನಾವಡ ಸಮಾಧಾನಕರ ಬಹುಮಾನವಾದ ಗ್ರೈಂಡರ್ ಗೆದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಬಹುಮಾನಗಳನ್ನು ವಿತರಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು. ಗಣಪಯ್ಯ ಗಾಣಿಗ ಸ್ವಾಗತಿಸಿದರು. ರಘುರಾಮ ಆಚಾರ್ಯ ವಂದಿಸಿದರು. ಹಾವಳಿ ಬಿಲ್ಲವ ನಿರೂಪಿಸಿದರು. ನಿರ್ದೇಶಕರಾದ ಕೆ. ಮೋಹನ ಪೂಜಾರಿ, ಬಿ. ಎಸ್. ಸುರೇಶ ಶೆಟ್ಟಿ, ಗುರುರಾಜ ಹೆಬ್ಬಾರ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.