ADVERTISEMENT

ಎನ್‌ಎಂಪಿಟಿ: ಪ್ರಥಮಬಾರಿಗೆ ಜವಳಿ ಉತ್ಪನ್ನ ರಫ್ತು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 5:55 IST
Last Updated 8 ಮಾರ್ಚ್ 2011, 5:55 IST

ಸುರತ್ಕಲ್: ನವಮಂಗಳೂರು ಬಂದರು ಸೋಮವಾರ ಜವಳಿ ಉತ್ಪನ್ನವಾದ ಕಾಟನ್ ಬೆಡ್‌ಶೀಟ್ ಸರಕುಗಳನ್ನು ಅಮೆರಿಕಕ್ಕೆ ರಫ್ತು ಮಾಡುವ ಮೂಲಕ ಮೊದಲ ಬಾರಿಗೆ ಜವಳಿ ಉತ್ಪನ್ನಗಳ ರಫ್ತು ವ್ಯವಹಾರ ಪ್ರಾರಂಭಿಸಿದೆ.ಹಾಸನ ವಿಶೇಷ ಆರ್ಥಿಕ ವಲಯದ ಕಂಪೆನಿಯಲ್ಲೊಂದಾಗಿರುವ ಹಿಮತ್ಸಿಕ್ಕಿಂಗ್ ಅಸಿಡಾ ಕಂಪೆನಿ ನವಮಂಗಳೂರು ಬಂದರು ಮೂಲಕ ಪರಿಷ್ಕೃತ ಕಾಟನ್ ಉತ್ಪನ್ನದ ಬೆಡ್ ಶೀಟ್‌ಗಳ 18 ಟನ್ ತೂಕದ 4237 ಬಂಡಲ್‌ಗಳಲ್ಲಿ ಸರಕನ್ನು ಎಂಇಒಯಲ್ ಟ್ರಸ್ಟ್ ನೌಕೆಯ ಮೂಲಕ ಸಾಗಿಸಿದೆ.

ಈ ನೌಕೆ ಮಾ.9ರಂದು ಗುಜರಾತಿನ ಮಂದ್ರಾ ಬಂದರಿಗೆ ತಲುಪಲಿದ್ದು ಅಲ್ಲಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿಲಿದೆ. ಕೇವಲ 28 ದಿನಗಳಲ್ಲಿ ಅಮೆರಿಕಾ ತಲುಪಲಿದ್ದು ಇದು  ಅತೀ ಕಡಿಮೆ ಅವಧಿಯ ಪ್ರಯಾಣವಾಗಿದೆ.

ಆಮದು: ಸೋಮವಾರ ಗಲ್ಫ್ ರಾಷ್ಟ್ರದಿಂದ ಕಟ್ಟಡ ಸಾಮಗ್ರಿಯನ್ನು ಬಂದರು ಆಮದು ಮಾಡಿಕೊಂಡಿದೆ. ಕಿನ್ನಿಗೋಳಿಯಲ್ಲಿ ಅನಿವಾಸಿ ಭಾರತೀಯರೊಬ್ಬರು ಬೃಹತ್ ವಸತಿಸಮುಚ್ಚಯ ನಿರ್ಮಿಸಲಿರುವುದರಿಂದ  ಸುಮಾರು 90 ಕಂಟೈನರ್‌ನಲ್ಲಿ ಬಂದರಿಗೆ ಕಟ್ಟಡ ಸಾಮಗ್ರಿ ಆಮದಾಗಿದೆ. ಈ ವರ್ಷ  ಬಂದರು ಮಂಡಳಿ 36 ಸಾವಿರ ಕಂಟೈನರ್‌ಗಳನ್ನು ನಿರ್ವಹಣೆ ಮಾಡಿ ಶೇ. 27ರಷ್ಟು ಪ್ರಗತಿ ಸಾಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.