ADVERTISEMENT

ಒಖಿ ಚಂಡಮಾರುತಕ್ಕೆ ಜತೆಯಾದ ಸೂಪರ್‌ ಮೂನ್‌

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 5:35 IST
Last Updated 4 ಡಿಸೆಂಬರ್ 2017, 5:35 IST
ಪಡುಕರೆಯಲ್ಲಿ ಭಾನುವಾರ ಸಮುದ್ರದ ತಡಕ್ಕೆ ಅಪ್ಪಳಿಸುತ್ತಿರುವ ಅಲೆಗಳು.
ಪಡುಕರೆಯಲ್ಲಿ ಭಾನುವಾರ ಸಮುದ್ರದ ತಡಕ್ಕೆ ಅಪ್ಪಳಿಸುತ್ತಿರುವ ಅಲೆಗಳು.   

ಉಡುಪಿ: ಅರಬ್ಬಿ ಸಮುದ್ರ ಒಖಿ ಚಂಡಮಾರುತದಿಂದ ಆತಂಕದಿಂದಾಗಿ ಮೀನುಗಾರಿಗೆ ತೆರಳಿದ ಬೋಟ್‌ಗಳು ಮಲ್ಪೆ ಬಂದರಿನಲ್ಲಿ ಲಂಗರು ಹಾಕಿ ನಿಲ್ಲಿಸಲಾಗಿದೆ. ಒಖಿ ಚಂಡಮಾರುತದ ಪರಿಣಾಮ ಪಡುಕರೆ, ಉದ್ಯಾವರದಲ್ಲಿ ಶನಿವಾರ ರಾತ್ರಿ ಅಲೆಗಳ ಅಬ್ಬರ ಜೋರಾಗಿತ್ತು. ಭಾನುವಾರ ಬೆಳಿಗ್ಗೆ ಅಲೆಗಳ ಆರ್ಭಟ ಕಡಿಮೆ ಇದ್ದರೂ ಸಂಜೆ ಆಗುತ್ತಿದ್ದಂತೆ ಒಖಿ ಚಂಡ ಮಾರುತಕ್ಕೆ ಸೂಪರ್‌ ಮೂನ್‌ ಜೊತೆಯಾಗುತ್ತಿದ್ದಂತೆ ಸಮುದ್ರ ಅಲೆಗಳ ಏರಿಳಿತದಲ್ಲಿ ವ್ಯತ್ಯಾಸ ಕಂಡು ಬಂತು.

ಒಖಿ ಚಂಡಮಾರುತದಿಂದ ಮಲ್ಪೆ ಬಂದರಿನಿಂದ ತೆರಳಿದ ಶೇ70 ರಷ್ಟು ಬೋರ್ಟ್‌ಗಳು ಮೂಲ ಸ್ಥಾನಕ್ಕೆ ಬಂದಿವೆ. ಉಳಿದಂತೆ ಸ್ಥಳೀಯ ಶೇ 30ರಷ್ಟು ಆಳ ಸಮುದ್ರ ಬೋಟ್‌ಗಳು ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಲಂಗರು ಹಾಕಿವೆ. ತಮಿಳುನಾಡು, ಕೇರಳದ ಸುಮಾರು 170 ಬೋಟ್‌ಗಳು ಮಲ್ಪೆ ಬಂದರಿಗೆ ಬಂದು ಸೇರಿವೆ.

ಮುಂಜಾಗೃತ ಕ್ರಮವಾಗಿ ಜನರನ್ನು ಸಮುದ್ರದ ತಡಕ್ಕೆ ತೆರಳದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿರುವ ದೃಶ್ಯ ಕಂಡು ಬಂದವು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳ ಜತೆಗೆ ಸಭೆ ನಡೆಸಲಾಗಿದೆ.

ADVERTISEMENT

* * 

‘ಈ ಬಾರಿ ಸೂಪರ್‌ ಮೂನ್‌ಗೆ ಪೂರ್ಣ ಹುಣ್ಣಿಮೆ ಹಾಗೂ ಒಖಿ ಚಂಡಮಾರುತ ಬಿರುಗಾಳಿ ಜೊತೆಯಾಗಿರುವುದರಿಂದ ಸಮುದ್ರದ ಅಲೆಗಳ ಏರಿಳಿತ ಜೋರಾಗಿದೆ.
ಡಾ. ಎ.ಪಿ. ಭಟ್,
ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.