ADVERTISEMENT

`ಕರ್ಮ ಚಿಂತನೆಗೆ ಗುರುಕುಲ ಅಗತ್ಯ'

ಫಲಿಮಾರು ಮಠದಲ್ಲಿ ವಸಂತೋತ್ಸವ- ಹನುಮಜ್ಜಯಂತಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 10:11 IST
Last Updated 24 ಏಪ್ರಿಲ್ 2013, 10:11 IST
ಫಲಿಮಾರು ಗ್ರಾಮದಲ್ಲಿರುವ ಫಲಿಮಾರು ಮೂಲ ಮಠದಲ್ಲಿ ವಸಂತೋತ್ಸವ- ಹನುಮ ಜಯಂತಿ ಆಚರಣೆ ಸಂದರ್ಭದಲ್ಲಿ ರಾಜರಾಜೇಶ್ವರ ತೀರ್ಥರ ಸಂಸ್ಮರಣಾರ್ಥ ನೀಡುವ `ರಾಜರಾಜೇಶ್ವರ ಪ್ರಶಸ್ತಿ'ಯನ್ನು ಮಂತ್ರಾಲಯದ ನಿತ್ಯಾಗ್ನಿಹೋತ್ರಿ-ಸೋಮಯಾಜಿ ವಿದ್ವಾನ್ ಪಿ.ರಾಮಕೃಷ್ಣಾಚಾರ್ಯ ಅವರಿಗೆ ಫಲಿಮಾರು ಮಠಾಧೀಶ ವಿದ್ಯಾಧೀಶತೀರ್ಥ ಶ್ರೀಪಾದರು ನೀಡಿ ಗೌರವಿಸಿದರು. 	(ಪಡುಬಿದ್ರಿ ಚಿತ್ರ)
ಫಲಿಮಾರು ಗ್ರಾಮದಲ್ಲಿರುವ ಫಲಿಮಾರು ಮೂಲ ಮಠದಲ್ಲಿ ವಸಂತೋತ್ಸವ- ಹನುಮ ಜಯಂತಿ ಆಚರಣೆ ಸಂದರ್ಭದಲ್ಲಿ ರಾಜರಾಜೇಶ್ವರ ತೀರ್ಥರ ಸಂಸ್ಮರಣಾರ್ಥ ನೀಡುವ `ರಾಜರಾಜೇಶ್ವರ ಪ್ರಶಸ್ತಿ'ಯನ್ನು ಮಂತ್ರಾಲಯದ ನಿತ್ಯಾಗ್ನಿಹೋತ್ರಿ-ಸೋಮಯಾಜಿ ವಿದ್ವಾನ್ ಪಿ.ರಾಮಕೃಷ್ಣಾಚಾರ್ಯ ಅವರಿಗೆ ಫಲಿಮಾರು ಮಠಾಧೀಶ ವಿದ್ಯಾಧೀಶತೀರ್ಥ ಶ್ರೀಪಾದರು ನೀಡಿ ಗೌರವಿಸಿದರು. (ಪಡುಬಿದ್ರಿ ಚಿತ್ರ)   

ಪಡುಬಿದ್ರಿ: `ಕರ್ಮದ ಚಿಂತನೆಗೋಸ್ಕರ ಪ್ರಾಥಸ್ಮರಣೀಯ ಪಲಿಮಾರು ಶ್ರಿಗಳು ಯೋಗದೀಪಿಕಾ ಗುರುಕುಲ ಸ್ಥಾಪಿಸಿದರು. ಸಮಾಜದ ಶ್ರೇಯಸ್ಸಿಗೋಸ್ಕರ ನಿಮ್ಮ ಜೀವನ ಮುಡಿಪಾಗಿರಲಿ' ಎಂದು ಪಲಿಮಾರು ವಿದ್ಯಾಧೀಶ ಶ್ರಿಪಾದರು ಹೇಳಿದರು.

ಮಂಗಳವಾರ ಪಲಿಮಾರು ಗ್ರಾಮದಲ್ಲಿರುವ ಪಲಿಮಾರು ಮೂಲ ಮಠದಲ್ಲಿ ವಸಂತೋತ್ಸವ- ಹನುಮಜ್ಜಯಂತಿ ಆಚರಣೆ ಸಂದರ್ಭ ಪಲಿಮಾರು ಮಠ ಅಧೀನದ ಯೋಗದೀಪಿಕಾ ಘಟಕೋತ್ಸವದಲ್ಲಿ ಅವರು ವಿದ್ಯಾರ್ಥಿಗಳಿಗೆ ಅನುಶಾಸನ ಮಾಡಿ ಆಶೀರ್ವದಿಸಿದರು.

ವಿದ್ಯಾರ್ಜನೆ ಮುಗಿಸಿದ ನಾಲ್ವರು ವಿದ್ಯಾರ್ಥಿಗಳಿಗೆ ಶ್ರಿಗಳು ದೇವರ ಪೆಟ್ಟಿಗೆ, ಪೂಜಾ ಬೆಳ್ಳಿ ಸಾಮಾಗ್ರಿ ಸಹಿತ ಕರಂಡಕಗಳನ್ನು ವಿತರಿಸಿದರು.

ಗುರುಕುಲ ಅಗತ್ಯ: ಪೇಜಾವರ ಕಿರಿಯಶ್ರಿ ವಿಶ್ವಪ್ರಸನ್ನ ಶ್ರಿಪಾದರು ಆಶೀರ್ವದಿಸಿ ಹಿಂದೆ ಹಳ್ಳಿ ಹಳ್ಳಿಗಳಲ್ಲಿ ವೇದ ವಿದ್ವಾಂಸರು ಬೇಕಾದಷ್ಟಿದ್ದರು. ಇಂದು ತೀರ ಇಳಿಮುಖವಾಗುತ್ತಿರುವುದು ಕಳವಳಕಾರಿಯಾಗಿದೆ. ಈ ನಿಟ್ಟಿನಲ್ಲಿ ಗುರುಕುಲಗಳ ಸಂಖ್ಯೆ ಅಧಿಕವಾಗಬೇಕು ಎಂದರು.

ಉತ್ತಮ ಸಂಸ್ಕೃತಿಗಾಗಿ ಪ್ರಾಚೀನ ಕಾಲದಲ್ಲಿ ಗುರುಕುಲ ಪದ್ಧತಿ ಜಾರಿಯಲ್ಲಿತ್ತು. ಈ ನಿಟ್ಟಿನಲ್ಲಿ ಯೋಗದೀಪಿಕಾ ಗುರುಕುಲ ಸಮಜಕ್ಕೆ ಉನ್ನತ ಶಿಕ್ಷಿತರನ್ನು ನೀಡುತ್ತಿದೆ ಎಂದು ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನತೀರ್ಥ ಅಭಿಪ್ರಾಯಪಟ್ಟರು.

ಘಟಿಕೋಪನ್ಯಾಸ ಮಾಡಿದ ಗೋಸೇವಾ ಆಯೋಗದ ಅಧ್ಯಕ್ಷ ಎಂ.ಬಿ.ಪುರಾಣಿಕ್,  ಮುಂಬೈ ಜ್ಯೋತಿಷ್ಯ ಪೆರ್ಣಂಕಿಲ ಹರಿದಾಸ ಭಟ್, ಡಾ.ಸುರೇಶ್ ರಾವ್ ಕಟೀಲು, ರಾಜರಾಜೇಶ್ವರ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಪಿ.ರಾಮೃಷ್ಣಾಚಾರ್ಯ ಮಂತ್ರಾಲಯ ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ: ರಾಜರಾಜೇಶ್ವರ ತೀರ್ಥರ ಸಂಸ್ಮರಣಾರ್ಥ ನೀಡುವ `ರಾಜರಾಜೇಶ್ವರ ಪ್ರಶಸ್ತಿ'ಯನ್ನು ಮಂತ್ರಾಲಯದ ನಿತ್ಯಾಗ್ನಿಹೋತ್ರಿ-ಸೋಮಯಾಜಿ ವಿದ್ವಾನ್ ಪಿ.ರಾಮಕೃಷ್ಣಾಚಾರ್ಯ ಅವರಿಗೆ ನೀಡಿ ಗೌರವಿಸಲಾಯಿತು.

ಫಲಿಮಾರು ಮಠಾಧೀಶ ವಿದ್ಯಾಧೀಶತೀರ್ಥ ಶ್ರೀಪಾದರು ರಾಮಕೃಷ್ಣಾಚಾರ್ಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿಯು ರೂ. 50000 ನಗದು, ರಜತ ಫಲಕವನ್ನು ಹೊಂದಿದೆ.

ವಿದ್ಯಾರ್ಥಿಗಳಾದ ಶಿವರಾಜ ಉಪಾಧ್ಯಾಯ ಕಂಬ್ಳಕಟ್ಟ, ಮೋಹನಕುಮಾರ ಕರಂಬಳ್ಳಿ, ರಾಜೇಂದ್ರಪ್ರಸಾದ್ ಕುಕ್ಕುಂದೂರು, ವಿನಯರಾಜ ಭಟ್ ಶಿರ್ವ ಶಾಸ್ತಾನುವಾದ ಮಾಡಿದರು.

ವಿದ್ಯಾಪೀಠದ ಪ್ರಾಂಶುಪಾಲ ವಿದ್ವಾನ್ ಶಂಕರನಾರಾಯಣ ಭಟ್ ಸ್ವಾಗತಿಸಿದರು. ಮೇಲ್ವಿಚಾರಕ ವಿದ್ವಾನ್ ಪಿ.ಎಸ್.ಲಕ್ಷ್ಮಿ ನಾರಾಯಣ ಅಡ್ವೆ ಪ್ರಸ್ತಾವಿಸಿದರು. ಅಧ್ಯಾಪಕ ವಿದ್ವಾನ್ ಶ್ರಿನಿವಾಸಾಚಾರ್ಯ ಶ್ರೇಯಾಃ ಪ್ರಾರ್ಥನೆ ಮಾಡಿದರು. ಶ್ರಿನಿವಾಸಭಟ್-ವಾಸುದೇವ ಉಪಾಧ್ಯಾಯ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.