ADVERTISEMENT

ಕಾರ್ಕಳ : ಗಾಳಿ ಮಳೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 12:40 IST
Last Updated 2 ಆಗಸ್ಟ್ 2013, 12:40 IST

ಕಾರ್ಕಳ: ತಾಲ್ಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗಾಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ  ಹಾನಿ ಉಂಟಾಗಿದೆ.

ತಾಲ್ಲೂಕಿನ ಕಣಜಾರು ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪರಿಸರ ದಲ್ಲಿ ಬಿದ್ದ ಭಾರಿ ಮಳೆಗೆ ದೇವಸ್ಥಾನದ ಕಟ್ಟಡಕ್ಕೆ ಹಾನಿಯಾಗಿದ್ದು, ಮೇಲ್ಛಾ ವಣಿಯ ತಗಡು, ಹೆಂಚು ಹಾರಿ ಹೋಗಿವೆ. ದೇವಾಲಯದ ಧ್ವಜಸ್ಥಂಭ ವಾಲಿಕೊಂಡಿದೆ. ಸುಮಾರು  ರೂ.10ಲಕ್ಷ ನಷ್ಟ ಸಂಭವಿಸಿದೆ.

ತಾಲೂಕಿನಲ್ಲಿ ಸುಮಾರು ನೂರಕ್ಕೂ ಅಧಿಕ ಬೋಗಿ ಮರಗಳು ನೆಲಕ್ಕುರಳಿದ್ದು, 16 ವಿದ್ಯುತ್ ಕಂಬಗಳು ಮುರಿದಿವೆ. ಇದರ ಪರಿಣಾಮ ಮೆಸ್ಕಾಂಗೆ ಸುಮಾರು ರೂ.70ಸಾವಿರ ಹಾನಿಯಾಗಿದೆ. ಹಾಡಿ ಯಂಗಡಿ ಎಂಬಲ್ಲಿನ ಮಂಜೊ ಟ್ಟುವಿನ ಶುಭಕರ ಆಚಾರ್ಯ ಎಂಬವರ ಮನೆ ಮೇಲೆ ಹಲಸಿನ ಮರಬಿದ್ದು ಸುಮಾರು ರೂ.50ಸಾವಿರ ನಷ್ಟ ಸಂಭವಿಸಿದೆ.

ಕಮಲ ನಾಯ್ಕ ಎನ್ನುವವರ ಮನೆಯ ಹೆಂಚು ಹಾರಿಹೋಗಿ ರೂ. 25ಸಾವಿರ ಹಾನಿ ಸಂಭವಿಸಿದೆ. ಇತರ 10ಮನೆಗಳಿಗೆ ಹಾನಿಯಾನಿಯಾಗಿದ್ದು ರೂ.50ಸಾವಿರ ನಷ್ಟ ಸಂಭವಿಸಿದೆ. ಮೀನಾ ಲಕ್ಷಣಿ ಅವರ ತೋಟದ ರಬ್ಬರ ಗಿಡಗಳು ಕಿತ್ತು ಬಿದ್ದಿವೆ. ತಾಲ್ಲೂಕಿನ ಕೆರ್ವಾಶೆ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದ ತಗಡು, ಹೆಂಚು ಹಾರಿ ಹೋಗಿ 25ಸಾವಿರ ನಷ್ಟ ಸಂಭವಿಸಿದೆ.

ಇತರ ಐದು ಮನೆಗಳ ಹೆಂಚು ಹಾರಿಹೋಗಿ ರೂ.15ಸಾವಿರ ನಷ್ಟ ಹಾನಿ ಸಂಭವಿಸಿದೆ. ತಾಲ್ಲೂಕಿನ ನಿಂಜೂರು ಗ್ರಾಮದ ನರಸಿಂಹ ಪೂಜಾರಿ ಎನ್ನುವವರ ಮನೆ ಮೇಲೆ ಮರಬಿದ್ದು ಸುಮಾರು ರೂ.50ಸಾವಿರ ನಷ್ಟವಾಗಿದೆ.

ಶೇಖರ ಪೂಜಾರಿ ಎನ್ನುವವರ ಪಂಪ್‌ಸೆಟ್ ಮೇಲೆ ಮರಬಿದ್ದು ಸುಮಾರು ರೂ.15ಸಾವಿರ ಹಾನಿ ಸಂಭವಿಸಿದೆ. ತಾಲ್ಲೂಕಿನ ದುರ್ಗಾ ಗ್ರಾಮದ ಸುನಂದಾ ಪೂಜಾರಿ ಎನ್ನುವವರ ಕೊಟ್ಟಿಗೆಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.