ADVERTISEMENT

ಕ್ರಿಕೆಟ್: ಕುಕ್ಕುಂದೂರು ಸಾಯಿ ಕ್ರಿಕೆಟರ್ಸ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 9:30 IST
Last Updated 12 ಮಾರ್ಚ್ 2011, 9:30 IST
ಕ್ರಿಕೆಟ್: ಕುಕ್ಕುಂದೂರು ಸಾಯಿ ಕ್ರಿಕೆಟರ್ಸ್‌ಗೆ ಪ್ರಶಸ್ತಿ
ಕ್ರಿಕೆಟ್: ಕುಕ್ಕುಂದೂರು ಸಾಯಿ ಕ್ರಿಕೆಟರ್ಸ್‌ಗೆ ಪ್ರಶಸ್ತಿ   

ಅತ್ತೂರು (ಬಜಗೋಳಿ): ಜಾಗತಿಕ ಮಟ್ಟದಲ್ಲಿ ಕ್ರಿಕೆಟ್‌ನಲ್ಲಿ ಭಾರತ ಹೆಸರು ಗಳಿಸುತ್ತಿದ್ದರೂ ಶ್ರೇಷ್ಠ ಕ್ರೀಡಾಪಟುಗಳನ್ನು ತಯಾರು ಗೊಳಿಸಲು ಗ್ರಾಮಾಂತರ ಪ್ರದೇಶದಲ್ಲಿ ಉತ್ತೇಜನ ದೊರಕುತ್ತಿಲ್ಲ. ಸಾಕಷ್ಟು ಮಂದಿ ಯುವಕರಲ್ಲಿ ಕ್ರಿಕೆಟ್ ಆಸಕ್ತಿ ಪರಿಶ್ರಮಗಳಿವೆ. ಆದರೆ ಅದಕ್ಕೆ ಪೂರಕ ಸಹಕಾರಕ್ಕೆ ಸರ್ಕಾರ ಮುಂದಾಗಬೇಕು ಎಂದು ಉದ್ಯಮಿ ಯುವರಾಜ್ ಶೆಟ್ಟಿ ಹೇಳಿದರು.

ಅತ್ತೂರು ಯಂಗ್ ಫ್ರೆಂಡ್ಸ್ ಕ್ಲಬ್ ಇತ್ತೀಚೆಗೆ ಆಯೋಜಿಸಿದ ಎರಡು ದಿನಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಪಂದ್ಯಾವಳಿಯಲ್ಲಿ ಸತತವಾಗಿ ಪಾಲ್ಗೊಂಡರೆ ಪರಸ್ಪರ ಹೊಂದಾಣಿಕೆ, ಸ್ಪರ್ಧಾ ಮನೋಭಾವ, ಸಮಾನ ಮನಸ್ಕತೆ ವೃದ್ಧಿಸುತ್ತದೆ. ಈ ಗುಣಗಳನ್ನು ಬದುಕಿನಲ್ಲೂ ಅಳವಡಿಸಿಕೊಂಡರೆ ಗುರಿ ಸಾಧನೆಯಲ್ಲಿ ಯಶಸ್ವಿಯಾಗಬಹುದು ಎಂದರು.

ವಕೀಲ ಕೆ. ನವೀನ್‌ಚಂದ್ರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ತಾಲ್ಲೂಕಿನ 45 ತಂಡಗಳು ಭಾಗವಹಿಸಿದ ಎರಡು ದಿನಗಳ ಪಂದ್ಯಾವಳಿಯಲ್ಲಿ ಕುಕ್ಕುಂದೂರು ಅಯ್ಯಪ್ಪನಗರದ ಸಾಯಿ ಕ್ರಿಕೆಟರ್ಸ್‌ ಎ ಮತ್ತು ಬಿ ತಂಡಗಳು ಜಂಟಿ ವಿಜೇತರಾಗಿ ಮೂಡಿಬಂದವು. ಸರಣಿಶ್ರೇಷ್ಠ ಅನೀಶ್ ಭಂಡಾರಿ, ಪಂದ್ಯ ಪುರುಷೋತ್ತಮ ಸಂಪತ್, ಉತ್ತಮ ಬೌಲರ್ ನಿತ್ಯಾನಂದ, ಉತ್ತಮ ಬ್ಯಾಟ್ಸ್‌ಮನ್ ನಹೀಮ್ ಈ ನಾಲ್ಕು ಪ್ರಶಸ್ತಿಗಳು ಸಾಯಿ ಕ್ರಿಕೆಟರ್ಸ್‌ ಪಾಲಾಯಿತು. ಸಮಾರಂಭದಲ್ಲಿ ಸಾಯಿ ಕ್ರಿಕೆಟರ್ಸ್‌ ಅಧ್ಯಕ್ಷ ಭರತ್ ಶೆಟ್ಟಿ, ಉದ್ಯಮಿ ರುಕ್ಮಯ್ಯ ಶೆಟ್ಟಿಗಾರ್, ಯಂಗ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಭಾಸ್ಕರ್, ಸುಕೇಶ್ ಶೆಟ್ಟಿ, ಲೋಕೇಶ್, ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.