ADVERTISEMENT

ಗಮನ ಸೆಳೆದ ಕೊಂಕಣಿ ಯಕ್ಷಗಾನ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 4:28 IST
Last Updated 5 ಮಾರ್ಚ್ 2018, 4:28 IST
ಮುಂಬೈಯ ಜನಪ್ರಿಯ ಯಕ್ಷಗಾನ ಕಲಾ ಮಂಡಲದ ಕಲಾವಿದರು ಗಂಗೊಳ್ಳಿ ಮಲ್ಯರಮಠ ವೆಂಕಟರಮಣ ದೇವಸ್ಥಾನದಲ್ಲಿ ಶನಿವಾರ ‘ಭಸ್ಮಾಸುರ ಮೋಹಿನಿ’ ಕೊಂಕಣಿ ಯಕ್ಷಗಾನ ಪ್ರದರ್ಶಿಸಿದರು. (ಬೈಂದೂರು ಚಿತ್ರ)
ಮುಂಬೈಯ ಜನಪ್ರಿಯ ಯಕ್ಷಗಾನ ಕಲಾ ಮಂಡಲದ ಕಲಾವಿದರು ಗಂಗೊಳ್ಳಿ ಮಲ್ಯರಮಠ ವೆಂಕಟರಮಣ ದೇವಸ್ಥಾನದಲ್ಲಿ ಶನಿವಾರ ‘ಭಸ್ಮಾಸುರ ಮೋಹಿನಿ’ ಕೊಂಕಣಿ ಯಕ್ಷಗಾನ ಪ್ರದರ್ಶಿಸಿದರು. (ಬೈಂದೂರು ಚಿತ್ರ)   

ಬೈಂದೂರು: ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಲ್ಲಿನ ನಿನಾದ ಸಂಸ್ಥೆಯ ವತಿಯಿಂದ ಮುಂಬೈ ಜನಪ್ರಿಯ ಯಕ್ಷಗಾನ ಕಲಾ ಮಂಡಲದ ಕಲಾವಿದರಿಂದ ಶನಿವಾರ ಪ್ರದರ್ಶನಗೊಂಡ ‘ಭಸ್ಮಾಸುರ ಮೋಹಿನಿ’ ಕೊಂಕಣಿ ಯಕ್ಷಗಾನ ಮನಸೂರೆಗೊಂಡಿತು.

ಮೇಲ್‌ಗಂಗೊಳ್ಳಿ ರವೀಂದ್ರ ಎನ್. ಪೈ ಇದರ ಸಾರಥ್ಯ ವಹಿಸಿದ್ದರು. ದೇವಸ್ಥಾನದ ಬ್ರಹ್ಮರಥೋತ್ಸವ ಹಾಗೂ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಮತ್ತು ಅವರ ಪಟ್ಟಶಿಷ್ಯ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ವಾಸ್ತವ್ಯದ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಯಕ್ಷಗಾನವನ್ನು ಎಚ್.ಗಣೇಶ ಕಾಮತ್, ಜಿ. ವೇದವ್ಯಾಸ ಕೆ. ಆಚಾರ್ಯ, ಎಂ. ರತ್ನಾಕರ ಪೈ ಬೆಂಗಳೂರು, ಯು. ಅಣ್ಣಪ್ಪ ಪೈ ಬೆಂಗಳೂರು, ಎಂ. ಜಿ. ರವೀಂದ್ರ ಪೈ ಮುಂಬೈ ಸಂಯುಕ್ತವಾಗಿ ಉದ್ಘಾಟಿಸಿದರು. ಬಾಂಡ್ಯ ಕೃಷ್ಟ್ರಾಯ ಪೈ ಮತ್ತು ಸತ್ಯನಾಥ ಪೈ ಬ್ರಹ್ಮಾವರ ಕಲಾವಿದರನ್ನು ಗೌರವಿಸಿದರು.

ADVERTISEMENT

ಭಾಗವತರಾಗಿ ಕಾವ್ಯಶ್ರೀ ನಾಯಕ್, ಮದ್ದಳೆಯಲ್ಲಿ ಶ್ರೀಪತಿ ನಾಯಕ್, ಚಂಡೆಯಲ್ಲಿ ರಾಮಕೃಷ್ಣ ಕಾಮತ್, ಕಲಾವಿದರಾಗಿ ಕುಕ್ಕೆಹಳ್ಳಿ ವಿಠಲ ಎನ್. ಪ್ರಭು, ಆರ್‍ಗೋಡು ಮೋಹನದಾಸ ಶೆಣೈ, ಮೇಲ್‌ಗಂಗೊಳ್ಳಿ ರವೀಂದ್ರ ಪೈ, ರಾಜ ತುಂಬೆ, ಯೋಗೀಶ ಡಾಂಗೆ, ನಿತಿನ್ ಪಾಟೀಲ್, ಸತೀಶ ಪ್ರಭು, ರಮಾಕಾಂತ, ವಾಸುದೇವ ಶೆಣೈ, ಕಡ್ತಲ ಕೃಷ್ಣ ನಾಯಕ್, ಗಣೇಶ ಪೈ ಮತ್ತು ಪ್ರಮೋದ ಕಾಮತ್ ವಿವಿಧ ಪಾತ್ರಗಳನ್ನು ನಿರ್ವಹಿಸಿದರು.

ಪ್ರಮೋದ ಕಾಮತ್ ಮುಂಬೈ, ಗುಜ್ಜಾಡಿ ಲಕ್ಷ್ಮೀನಾರಾಯಣ ನಾಯಕ್ ಮತ್ತು ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.