ADVERTISEMENT

`ಚುನಾವಣಾ ಮಾಹಿತಿ ಮನೆ ಮನೆಗೆ ತಲುಪಲಿ'

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 9:56 IST
Last Updated 8 ಏಪ್ರಿಲ್ 2013, 9:56 IST

ಮುಡಿಪು: ಅಪ್ನಾ ದೇಶ್ ಗ್ರಾಮಾ ಭಿವೃದ್ಧಿ ಆಂದೋಲನದ ಆಶ್ರಯದಲ್ಲಿ ಜನ ಶಿಕ್ಷಣ ಟ್ರಸ್ಟ್ ಮಾದರಿ ಗ್ರಾಮ ವಿಕಾಸ ಕೇಂದ್ರ ಹಾಗೂ ಮುಡಿಪು ಆದಿವಾಸಿ ಕೊರಗರ ಗಿರಿಸಿರಿ ಕಲಾತಂಡದ ನೇತೃತ್ವದಲ್ಲಿ ಇಲ್ಲಿ ಭಾನುವಾರ ಮತದಾನದ ಜಾಗೃತಿ ಜಾಥಾ ನಡೆಯಿತು.

ಜಿಲ್ಲಾಧಿಕಾರಿ  ಹರ್ಷಗುಪ್ತ ಮಾತನಾಡಿ, `ಮತದಾರರಲ್ಲಿ ಜಾಗೃತಿ ಹುಟ್ಟಿಸುವಂತಹ ಕಾರ್ಯಕ್ರಮ ಇದುವರೆಗೆ ಅಧಿಕಾರಿ ಮಟ್ಟಕ್ಕೆ ಸೀಮಿತ ವಾಗಿತ್ತು. ಈಗ ಅದು ಆದಿವಾಸಿ ಸಮುದಾಯಕ್ಕೂ ವಿಸ್ತರಿಸಿದೆ. ಇಂತಹ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಜನ ಸಾಮಾನ್ಯರಿಗೆ ಪೂರಕವಾಗಿರುವ ಇಂತಹ ಮಾಹಿತಿಗಳು ಪ್ರತಿ ಮನೆ ಮನೆಗೆ ತಲುಪಲು ಸಹಕಾರಿ ಯಾಗುತ್ತದೆ'ಎಂದರು.

`ಸಾರ್ವಜನಿಕರನ್ನು ತಲುಪುವ ಇಂತಹ ಕಾರ್ಯಕ್ರಮಗಳು ಹೆಚ್ಚ ಬೇಕು. ಜನ ಸಾಮಾನ್ಯರು ವಿವಿಧ ಸಂಘ ಸಂಸ್ಥೆಗಳು ಇಂತಹ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡರೆ ಬಹ ಳಷ್ಟು ಮಂದಿಗೆ ಉಪಕಾರಿ ಯಾಗುತ್ತದೆ' ಎಂದರು.

ದ.ಕ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ವಿಜಯಪ್ರಕಾಶ್, ನರೇಗ ಯೋಜನೆಯ ಒಂಬುಡ್ಸ್‌ಮನ್ ಶೀನ ಶೆಟ್ಟಿ, ಪಾಲಿಕೆ ಆಯುಕ್ತ ಹರೀಶ್ ಕುಮಾರ್, ಜನಶಿಕ್ಷಣ ಟ್ರಸ್ಟ್‌ನ ಕೃಷ್ಣಮೂಲ್ಯ, ವಾರ್ತಾಧಿಕಾರಿ ರೋಹಿಣಿ, ಕೊರಗ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.