ADVERTISEMENT

ದೃಷ್ಟಿಕೋನ ಬದಲಾಗಬೇಕು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 6:27 IST
Last Updated 14 ಮಾರ್ಚ್ 2016, 6:27 IST

ಉಡುಪಿ: ಸಮಾಜದಲ್ಲಿ ಮಹಿಳೆಯ ರನ್ನು ನೋಡುವ ದೃಷ್ಟಿಕೋನ ಬದಲಾಗ ಬೇಕು. ಆಗ ಮಾತ್ರ ಸಮಾಜದಲ್ಲಿ ಹೊಸ ಬದಲಾವಣೆ ತರಲು ಸಾಧ್ಯ ಎಂದು ಸಾಹಿತಿ ಪೂರ್ಣಿಮಾ ಜನಾರ್ದನ್‌ ಹೇಳಿದರು. ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಮಹಿಳೆಯರು ಜಾಗೃತ ರಾಗಬೇಕು.

ತಮ್ಮ ಬಿಡುವಿನ ಸಮಯ ದಲ್ಲಿ ವಿವಿಧ ರೀತಿಯ ಸ್ವ ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಕೇವಲ ಮನೆಯಲ್ಲಿ ಕೆಲಸ ಮಾಡುವುದರಿಂದ ಮಹಿಳಾ ಸಬಲೀಕರಣವಾಗಲು ಸಾಧ್ಯ ವಿಲ್ಲ ಎಂದರು.  ಕಾಲೇಜಿನ ಪ್ರಾಂಶು ಪಾಲೆ ರಾಧಿಕಾ ಪೈ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಆಡಳಿತಾಧಿ ಕಾರಿ ಪ್ರೊ. ದಯಾ ನಂದ ಶೆಟ್ಟಿ, ಜೇಸಿಐ ಉಡುಪಿ ಸಿಟಿ ಅಧ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು, ಇನ್ನರವೀಲ್‌ ಕ್ಲಬ್‌ನ ಅಧ್ಯಕ್ಷೆ ಶಾಂತ ಉಪಸ್ಥಿತರಿದ್ದರು. ಉಪ ನ್ಯಾಸಕಿ ಜ್ಯೋತಿ ಆಚಾರ್ಯ ರಾಜೀವ ನಗರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.