ADVERTISEMENT

ಪ್ಲಾಸ್ಟಿಕ್ ದುಷ್ಪರಿಣಾಮ ಜಾಗೃತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 8:20 IST
Last Updated 10 ಅಕ್ಟೋಬರ್ 2012, 8:20 IST

ಉಡುಪಿ: `ಪ್ಲಾಸ್ಟಿಕ್‌ನ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದು~ ಎಂದು ಅಲೆವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ಕಿಣಿ ಹೇಳಿದರು.

ಅಲೆವೂರು ಗ್ರಾಮ ಪಂಚಾಯಿತಿಯ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಇತ್ತೀಚೆಗೆ ಆಯೋಜಿಸಿದ್ದ ಪ್ಲಾಸ್ಟಿಕ್ ನಿಷೇಧ ಜನಜಾಗೃತಿ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ಥಳೀಯ ಸಂಸ್ಥೆ ಪ್ಲಾಸ್ಟಿಕ್  ನಿಷೇಧ ಹೇರಿದರೂ ಜನರ ಸಹಕಾರ ಇಲ್ಲದೆ ಇದು ಯಶಸ್ವಿಯಾಗುವುದಿಲ್ಲ. ಪ್ಲಾಸ್ಟಿಕ್‌ನಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಸಾರ್ವಜನಿಕರೂ ಸಹ ಈ ಬಗ್ಗೆ ಇತರರಿಗೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಚ್ಚಿದಾನಂದ ಭಟ್, ನೆಹರೂ ಹೈಸ್ಕೂಲ್‌ನ ಸ್ಕೌಟ್ ಮತ್ತು ಗೈಡನ ಶಿಕ್ಷಕ ಶೇಖರ ಕಲ್ಮಾಡಿ, ಶಿಕ್ಷಕಿ ಯಶೋಧಾ ಆರ್ಚಾಯ, ಗ್ರಾಮ ಪಂಚಾಯಿತಿ ಸದಸ್ಯೆ ಸುನಂದ ಶಂಕರ್, ಬೇಬಿ ರಾಜೇಶ್. ಎ. ಪ್ರಶಾಂತ್ ಆಚಾರ್ಯ, ಮಾಜಿ ಸದಸ್ಯ ಸತೀಶ ಪೂಜಾರಿ, ಶೇಖರ ಕಲಾ ಪ್ರತಿಭಾ, ಜಯ ಸೇರಿಗಾರ, ಅಜಿತ್ ಶೆಟ್ಟಿ, ಗೋಪಾಲ ಸೇರಿಗಾರ. ನಿವತ್ತ ಶಿಕ್ಷಕ ನರಸಿಂಹ ಹಾಂಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.