ADVERTISEMENT

ಬಾರ್ಕೂರು ವೇಣುಗೋಪಾಲಕೃಷ್ಣ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 10:48 IST
Last Updated 30 ನವೆಂಬರ್ 2017, 10:48 IST

ಬಾರ್ಕೂರು (ಬ್ರಹ್ಮಾವರ): ಗಾಣಿಗ ಸಮಾಜವು ಇನ್ನಷ್ಟು ಸಂಘಟಿತವಾಗಲು ಎಲ್ಲರ ಸಹಕಾರ ಬೇಕು ಎಂದು ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಕೆ.ಗೋಪಾಲ ಹೇಳಿದರು.

ಬಾರ್ಕೂರು ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಇತ್ತೀಚೆಗೆ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ವತಿಯಿಂದ ನಡೆದ ಕಾರ್ತಿಕ ದೀಪೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಿ.ಹಾರಾಡಿ ರಾಮ ಗಾಣಿಗ ಪ್ರಶಸ್ತಿಯನ್ನು ಯುವ ಕಲಾವಿದ ಕೆಮ್ಮಣ್ಣು ಪ್ರವೀಣ್ ಗಾಣಿಗ ಅವರಿಗೆ ನೀಡಿ ಗೌರವಿಸಲಾಯಿತು. ಪ್ರಾಂಶುಪಾಲ ಡಾ.ಕೆ.ನಿತ್ಯಾನಂದ, ಶಿಕ್ಷಕ ಗಣೇಶ ಚೆಲ್ಲೆಮಕ್ಕಿ, ಕ್ರೀಡಾಪಟು ವಿಶ್ವನಾಥ ಭಾಸ್ಕರ್ ಗಾಣಿಗ, ಪ್ರಜ್ಞಾ ಪ್ರಕಾಶ, ಕೆ.ಎಂ.ಶೇಖರ್ ಅವರನ್ನು ಸನ್ಮಾನಿಸಲಾಯಿತು. ದಾನಿ ಎನ್.ಸಂಜೀವ ರಾವ್ರ, ತ್ನಾ ದಂಪತಿಯನ್ನು ಗೌರವಿಸಲಾಯಿತು.

ADVERTISEMENT

ಬೆಂಗಳೂರು ಸೋಮಕ್ಷತ್ರೀಯ ಗಾಣಿಗ ಸಮಾಜದ ಅಧ್ಯಕ್ಷ ಎಚ್.ಟಿ.ನರಸಿಂಹ, ಗೌರವಾಧ್ಯಕ್ಷ ಬಿ.ಎಸ್. ಮಂಜುನಾಥ, ಬೆಂಗಳೂರಿನ ಹಳ್ಳಿಮನೆ ಹೋಟೆಲ್ ಮಾಲೀಕ ಸಂಜೀವರಾವ್ ನೀಲಾವರ, ಮುಂಬೈ ಗಾಣಿಗ ಸಮಾಜದ ಗೌರವಾಧ್ಯಕ್ಷ ಜಗನ್ನಾಥ ಗಾಣಿಗ, ಕುಂದಾಪುರ ತಾಲ್ಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೊಗ್ಗ ಗಾಣಿಗ, ಬೆಂಗಳೂರು ವೇಣುಗೋಪಾಲಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಂ.ಗೋಪಾಲಕೃಷ್ಣ, ಬಾರ್ಕೂರು ವೇಣುಗೋಪಾಲಕೃಷ್ಣ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ವಿಜಯ ಕೆ., ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಉಪಾಧ್ಯಕ್ಷ ಗೋಪಾಲ ಜಿ.ಚಲ್ಲೆಮಕ್ಕಿ, ರವಿರಾಜ್ ನಾರಾಯಣ, ಕೋಶಾಧಿಕಾರಿ ವಾಸುದೇವ ಬೈಕಾಡಿ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ ಗಾಣಿಗ ಸಾಲಿಗ್ರಾಮ ಸ್ವಾಗತಿಸಿದರು. ಆನಂದ ಗಾಣಿಗ ಅಂಬಲಪಾಡಿ, ಸುರೇಂದ್ರ ಗಾಣಿಗ ಕಾರ್ಕಡ, ಯೊಗೀಶ್ ಕೊಳಲಗಿರಿ, ರಘುರಾಮ್ ಬೈಕಾಡಿ ಸನ್ಮಾನಿತರ ಪರಿಚಯಿಸಿದರು. ಜತೆ ಕಾರ್ಯದರ್ಶಿ ಎ.ರಾಜೇಶ ಗಾಣಿಗ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.