ADVERTISEMENT

ಬ್ರಹ್ಮಾವರ: ವಿಶ್ವ ದಾದಿಯರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 14 ಮೇ 2014, 6:56 IST
Last Updated 14 ಮೇ 2014, 6:56 IST
ಬ್ರಹ್ಮಾವರ ಕುಂಜಾಲಿನ ವಿಶ್ವಕೀರ್ತಿ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿಶ್ವದಾದಿಯರ ದಿನಾಚರಣೆ ಸಂದರ್ಭ ನಡೆದ ಸಮಾರಂಭದಲ್ಲಿ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಕೆಂಜೂರು ಉಪಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ನಳಿನಿ ಅವರನ್ನು ಪ್ರೊಬೇಷನರಿ ಐ.ಪಿ.ಎಸ್. ಅಧಿಕಾರಿ ರಾಧಿಕಾ ಜಿ. ಸನ್ಮಾನಿಸಿದರು.

ಬ್ರಹ್ಮಾವರ: ಪ್ರೀತಿ, ಕರುಣೆ, ಸೇವಾ ದುಡಿತದೊಂದಿಗೆ ಕರ್ತವ್ಯವನ್ನು ಸಲ್ಲಿಸಿದಾಗ ಸಮಾಜ ಗುರುತಿಸುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರು ಕೀಳರಿಮೆ ಬಿಟ್ಟು ಸಮಾಜದ ಮಂಚೂಣಿಗೆ ಬರಬೇಕು ಎಂದು ಬ್ರಹ್ಮಾವರ ಪೊಲೀಸ್‌ ಠಾಣೆಯ ಪ್ರೊಬೆಷನರಿ ಐ.ಪಿ.ಎಸ್. ಅಧಿಕಾರಿ ರಾಧಿಕಾ ಜಿ. ಸಲಹೆ ನೀಡಿದರು.

ಕುಂಜಾಲಿನ ವಿಶ್ವಕೀರ್ತಿ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ವಿಶ್ವದಾದಿಯರ ದಿನಾಚರಣೆ ಸಂದರ್ಭ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಕೆಂಜೂರು ಉಪಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ನಳಿನಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ದಾದಿಯರ ಸೇವೆ ಅಪ್ರತಿಮ. ಮಹಿಳೆ ತ್ಯಾಗ ಸಮರ್ಪಣೆಗೆ ಇನ್ನೊಂದು ಹೆಸರು. ಈ ನಿಟ್ಟಿನಲ್ಲಿ ಜಯಂಟ್ಸ್‌ನ ಈ ಕಾರ್ಯಕ್ರಮ ಶ್ಲಾಘ­ನೀಯ ಎಂದು ತಿಳಿಸಿದರು.

ವಿವೇಕಾನಂದ ಕಾಮತ್, ಸ್ವ ಸಹಾಯ ಸಂಘದ ಬ್ರಹ್ಮಾವರದ ಒಕ್ಕೂಟದ ಉಪಾಧ್ಯಕ್ಷ ರಘು ನಾಯ್ಕ, ಸೇವಾ ಪ್ರತಿನಿಧಿ ಜ್ಯೋತಿ, ಜಯಂಟ್ಸ್ ಫೆಡರೇಶನ್ ಉಪಾಧ್ಯಕ್ಷ ಮಧುಸೂಧನ್ ಹೇರೂರು, ಜಯಂಟ್ಸ್ ಬ್ರಹ್ಮಾವರ ಕೋಶಾಧಿಕಾರಿ ದಾಮೋದರ್ ಮೆಂಡನ್, ಪೂರ್ವಾಧ್ಯಕ್ಷ  ಮಂಜುನಾಥ್ ಶೆಟ್ಟಿ­ಗಾರ್ ಮತ್ತಿತರರು ಉಪಸ್ಥಿತರಿದ್ದರು. ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಅಧ್ಯಕ್ಷ  ವಿಶ್ವನಾಥ ಶೆಟ್ಟಿ ಮಟಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ­ದರು. ಜಯಂಟ್ಸ್ ನ ಕಾರ್ಯಕಾರಿ ನಿರ್ವಾಹಕ ರಾಘವೇಂದ್ರ ಪ್ರಭು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.