ADVERTISEMENT

ಮಲೆಕುಡಿಯ ಸಮುದಾಯದ ಸಮಸ್ಯೆ: ಬಗೆಹರಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 9:02 IST
Last Updated 7 ಮಾರ್ಚ್ 2018, 9:02 IST
ಹೆಬ್ರಿ ಸಮೀಪದ ಮುದ್ರಾಡಿ ಕಬ್ಬಿನಾಲೆಯ ಮಲೆಕುಡಿಯ ಸಮುದಾಯದ ಮನೆ ಮಂದಿಯ ಸಮಸ್ಯೆಯನ್ನು ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಪೂಜಾರಿ ಆಲಿಸಿದರು. ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಇದ್ದರು.
ಹೆಬ್ರಿ ಸಮೀಪದ ಮುದ್ರಾಡಿ ಕಬ್ಬಿನಾಲೆಯ ಮಲೆಕುಡಿಯ ಸಮುದಾಯದ ಮನೆ ಮಂದಿಯ ಸಮಸ್ಯೆಯನ್ನು ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಪೂಜಾರಿ ಆಲಿಸಿದರು. ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಇದ್ದರು.   

ಹೆಬ್ರಿ: ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿನಾಲೆ ಗ್ರಾಮದ 22 ಮಲೆಕುಡಿಯ ಸಮುದಾಯದವರ ಸಮಸ್ಯೆಯನ್ನು ಶನಿವಾರ ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಪೂಜಾರಿ ನೇತೃತ್ವದಲ್ಲಿ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಆಲಿಸಿದರು.

‘ನಮ್ಮ ಸಮಸ್ಯೆಗಳಿಗೆ ಸ್ಪಂದಿಸದೆ, ನಮ್ಮನ್ನು ರಾಜಕೀಯವಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಮಲೆಕುಡಿಯ ಮಂದಿಯ ಸಣ್ಣ ಪುಟ್ಟ ಸಮಸ್ಯೆ ಉಂಟಾದರೂ ಅದನ್ನು ನಮ್ಮಲ್ಲೆ ಬಗೆಹರಿಸದೆ ಪೊಲೀಸ್ ಠಾಣೆಗೆ ಒಯ್ದು ಮತ್ತಷ್ಟು ಜಟಿಲಗೊಳಿಸಲಾಗುತ್ತದೆ. ನಮ್ಮ ಸಮಸ್ಯೆಯನ್ನು ಜನಪ್ರತಿನಿಧಿಗಳಾದ ತಾವು ಸರಿಪಡಿಸಬೇಕು’ ಎಂದು ಕಬ್ಬಿನಾಲೆಯ ರಘುರಾಮ ಗೌಡ, ಶೇಖರ ಗೌಡ ಮತ್ತು ಲಕ್ಷ್ಮಿನಾರಾಯಣ ಗೌಡ ಮನವಿ ಮಾಡಿದರು.

‘ಯಾವೂದೇ ಸಮಸ್ಯೆಯಾದರೂ ಭಯ ಪಡುವ ಅಗತ್ಯವಿಲ್ಲ. ಸರ್ಕಾರ ನಿಮ್ಮ ಜತೆಗಿದೆ. ಸರ್ಕಾರದ ಮಟ್ಟದಲ್ಲಿ ಎಲ್ಲ ಸಮಸ್ಯೆಯನ್ನು ಬಗೆಹರಿಸಿಕೊಡುತ್ತದೆ’ ಎಂದು ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಭರವಸೆ ನೀಡಿದರು.

ADVERTISEMENT

ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಪೂಜಾರಿ ಮಾತನಾಡಿ, ಗ್ರಾಮಸ್ಥರ ಸಮಸ್ಯೆಯನ್ನು ಪಂಚಾಯಿತಿ ಮಟ್ಟದಲ್ಲಿ ಆದ್ಯತೆಯ ನೆಲೆಯಲ್ಲಿ ಬಗೆಹರಿಸುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ ಕುಮಾರ ಶೆಟ್ಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.