ADVERTISEMENT

ಮಹಿಳೆಯರ ಹಕ್ಕುಗಳನ್ನು ರಕ್ಷಿಸಿ:ತಾರಾ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 13:29 IST
Last Updated 11 ಮಾರ್ಚ್ 2014, 13:29 IST

ಉಡುಪಿ: ‘ಸಾಮಾಜಿಕ ನ್ಯಾಯ ನೀಡುವ ವಕೀಲರು ಕಳಕಳಿಯಿಂದ ಕರ್ತವ್ಯ ನಿರ್ವಹಿಸಿ ಸ್ತ್ರೀಯರ ಹಕ್ಕು ಗಳನ್ನು ರಕ್ಷಿಸಬೇಕು’ ಎಂದು ಸಾಮಾ ಜಿಕ ಕಾರ್ಯಕರ್ತೆ ತಾರಾಭಟ್ ಹೇಳಿದರು.

ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಇಂದಿನ ಜಾಗತೀಕರಣದ ಯುಗದಲ್ಲಿ ಮಾರುಕಟ್ಟೆಯ ಶಕ್ತಿಗಳು ಎಲ್ಲಾ ಸೇವಾ ಕ್ಷೇತ್ರಗಳನ್ನು ನಿಯಂತ್ರಿಸುತ್ತಿದ್ದು, ವಕೀಲರು ಇದಕ್ಕೆ ಹೊರತಾಗಿಲ್ಲ. ನ್ಯಾ ಯ ವ್ಯವಸ್ಥೆ ಬದಲಾಗಿ ಮಹಿಳೆ ಯರು ಗೌರವದಿಂದ ಬಾಳುವ ವಾತಾವರಣ ನಿರ್ಮಾಣವಾಗಬೇಕು. ಪ್ರತಿಯೊಬ್ಬರಿ ಗೂ  ಸ್ತ್ರೀಯರ ಬಗ್ಗೆ ನೈಜ ಕಾಳಜಿ ಇರ ಬೇಕು ಎಂದರು.

ಭಾರತೀಯರ ಮನಸ್ಥಿತಿಯಲ್ಲಿ ಗಂಡು ಮಗುವೆಂದರೆ ಆಸ್ತಿ, ಹೆಣ್ಣು ಮಗು ವೆಂದರೆ ಬಾದ್ಯತೆ ಎಂಬ ಭಾವನೆಯಿದೆ. ಇದು ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಲು ಕಾರಣ. ಸ್ತ್ರೀ ಹಕ್ಕುಗಳ ರಕ್ಷಣೆಗೆ ಸಂಬಂ ಧಿಸಿದ ಕಾನೂನಿನಲ್ಲಿರುವ ನ್ಯೂನತೆಯ ನ್ನು ಹೋಗಲಾಡಿಸ ಬೇಕಾದ ಅಗತ್ಯ ಇದೆ ಎಂದು ಕಾಲೇಜಿನ ಪ್ರಾಂಶು ಪಾಲ ಪ್ರೊ.ಪ್ರಕಾಶ್ ಕಾಣಿವೆ ಹೇಳಿದರು.

ವಿದ್ಯಾರ್ಥಿನಿ ಎಸ್.ಎಚ್.ಶಹನಾಜ್ ಸ್ವಾಗತಿಸಿದರು. ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಅಂಬಿಕಾರಾಣಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.