ADVERTISEMENT

ಯುಪಿಎ ಆಡಳಿದಲ್ಲಿ ಭ್ರಷ್ಟಾಚಾರ: ಶೋಭಾ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 11:24 IST
Last Updated 21 ಮಾರ್ಚ್ 2014, 11:24 IST

ಉಡುಪಿ: ‘ಕಾಂಗ್ರೆಸ್ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರದ 10 ವರ್ಷಗಳ ಆಡಳಿತದಲ್ಲಿ ಅಭಿವೃದ್ಧಿ ಯಾಗದೆ ದೇಶ ೧೦ ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ಬೆಲೆ ಏರಿಕೆ, ಭಯೋತ್ಪಾದನೆ, ಭ್ರಷ್ಟಾಚಾರ ಹೆಚ್ಚಾ ಗಿದೆ’ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಕಲ್ಯಾಣಪುರದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ನವ ಭಾರತ ನಿರ್ಮಾಣ, ನಮ್ಮ ಸಾರ್ವ ಭೌಮತೆ ತೋರಿಸಲು ಯುವಕರು ಈ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು. ಮೋದಿಯನ್ನು ಪ್ರಧಾನಿ ಯಾಗಿಸಲು ಬಿಜೆಪಿಯನ್ನು ಚುನಾವಣೆ ಯಲ್ಲಿ ಗೆಲ್ಲಿಸಬೇಕು ಎಂದು ಹೇಳಿದರು.

‘ಎರಡು ಅವಧಿಯಲ್ಲಿ ಶಾಸಕನಾಗಿದ್ದ ವೇಳೆ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಹಲವು  ಅಭಿವೃದ್ಧಿ ಕೆಲಸಗಳು ನಡೆದಿದ್ದು, ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಎಂಬುದು ಕೇವಲ ಕನಸಾಗಿದೆ. ಬಿಪಿಎಲ್ ಕಾರ್ಡ್‌ ದಾರರಿಗೆ ಸರಿಯಾಗಿ ಪಡಿತರ ವಿತರಣೆ ಯಾಗುತ್ತಿಲ್ಲ, ಎಪಿಎಲ್ ಕಾರ್ಡ್‌ ದಾರರನ್ನು ಎಲ್ಲದರಿಂದ ವಂಚಿತರನ್ನಾಗಿ ಮಾಡಲಾಗಿದೆ. ಹಿಂದಿನ ಅವಧಿಯಲ್ಲಿ ಮಂಜೂರಾದ ಕೆಲಸಗಳನ್ನೇ ತಾವು ಮಾಡಿದ ಕೆಲಸಗಳೆಂಬಂತೆ ಕಾಂಗ್ರೆಸ್ಸಿಗರು ಪ್ರಚಾರ  ಮಾಡುತ್ತಿ ದ್ದಾರೆ’ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಆರೋಪಿಸಿದರು.

ರಾಜ್ಯ ಯುವಮೋರ್ಚಾ ಕಾರ್ಯ ದರ್ಶಿ ಯಶಪಾಲ ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶೀಲಾ ಕೆ. ಶೆಟ್ಟಿ, ರಾಜ್ಯ ಕಾರ್ಯದರ್ಶಿ ಶ್ಯಾಮಲಾ ಕುಂದರ್, ಹರಿಮಕ್ಕಿ ರತ್ನಾಕರ ಶೆಟ್ಟಿ, ರಾಜು ಕುಲಾಲ್, ಕಿಟ್ಟಪ್ಪ ಅಮೀನ್, ನಿಶಾನ್ ರೈ, ಯತೀಶ್ ವಾರಂಬಳ್ಳಿ, ನಳಿನಿ ಪ್ರದೀಪ್, ಜಯಂತಿ ವಾಸುದೇವ, ವೀಣಾ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.