ADVERTISEMENT

‘ರೈತರಿಗೆ ಭೂ ಸಮೃದ್ಧಿ ಯೋಜನೆ ವರ’

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 7:12 IST
Last Updated 16 ಮಾರ್ಚ್ 2018, 7:12 IST

ಕಾರ್ಕಳ: ರೈತರು ಭೂ ಸಮೃದ್ದಿ ಯೋಜನೆ ಅಡಿಯಲ್ಲಿ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯ ಪಡೆದು ಸ್ವಉದ್ಯೋಗ ನಡೆಸಲು ಉತ್ತಮ ಅವಕಾಶವಿದೆ ಎಂದು ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಶುಸಂಗೋಪನೆ ಇಲಾಖೆ ವತಿಯಿಂದ ಫಲಾನುಭವಿ ಹೈನುಗಾರರಿಗೆ ಪಶುಪಾಲನೆ ಕುರಿತು ಸಾಮರ್ಥ್ಯವರ್ಧನೆ ತರಬೇತಿ ಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಇದರಿಂದ ರೈತರು ಆರ್ಥಿಕ ಸ್ವಾವಲಂಬನೆ ಜತೆಗೆ ಜೀವನಮಟ್ಟ ಸುಧಾರಿಸಲಿದೆ ಎಂದು ಹೇಳಿದರು.

ಕುಕ್ಕುಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮನಾ ರಾವ್ ಅಧ್ಯಕ್ಷತೆ ವಹಿಸಿದ್ದರು.ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜೈರಾಜ್ ಪ್ರಕಾಶ್, ಎರ್ಲಪಾಡಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ ಇದ್ದರು.

ADVERTISEMENT

ಸಂಪನ್ಮೂಲ ವ್ಯಕ್ತಿಗಳಾದ ಡಾ. ವಾಸುದೇವ ಪೈ, ಡಾ ಶ್ರೀಕಾಂತ ಫಡ್ಕೆ, ಡಾ.ಸುನಿಲ್, ಡಾ.ಪರಶುರಾಮ್‌ ಹಾಗೂ ಡಾ.ಹರೀಶ್ ತಾಮನ್‌ಕರ್ ಪಶುಪಾಲನೆಯಲ್ಲಿ ತಳಿಗಳ ಆಯ್ಕೆ, ನಿರ್ವಹಣೆ ಮುಂತಾದವುಗಳ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಕಳ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಚ್.ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

ಪರವಾನಗಿ ನವೀಕರಣ
ಕಾರ್ಕಳ:
ಇಲ್ಲಿನ ಪುರಸಭಾ ವ್ಯಾಪ್ತಿಯ ಎಲ್ಲ ಉದ್ದಿಮೆದಾರರು 2017–18 ನೇ ಸಾಲಿನಲ್ಲಿ ಬಾಕಿ ಇರುವ ಮತ್ತು 2018–2019ನೇ ಸಾಲಿನ ಎಲ್ಲ ಉದ್ಯಮ ಪರವಾನಗಿಯನ್ನು 31ರ ಒಳಗಾಗಿ ನವೀಕರಿಸಿಕೊಳ್ಳುವಂತೆ ಪುರಸಭಾ ಪ್ರಕಟಣೆ ತಿಳಿಸಿದೆ.

ನವೀಕರಿಸದೇ ಇರುವ ಉದ್ಯ ಮದ ಪರವಾನಗಿಗೆ ದಂಡ ವಿಧಿಸಲಾಗುವುದು. ಆದ್ದರಿಂದ ಉದ್ಯಮೆದಾರರು ಅವಧಿಯೊಳಗೆ ಅರ್ಜಿಯೊಂದಿಗೆ ಉದ್ಯಮ ಪರವಾನಗಿ ಶುಲ್ಕ ಪಾವತಿಸಿ, ಬಾಡಿಗೆ ಕರಾರು ಪತ್ರ ಮತ್ತು ತೆರಿಗೆ ಪಾವತಿ ಪ್ರತಿ ಲಗತ್ತಿಸಿ  ನವೀಕರಿಸುವಂತೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.