ADVERTISEMENT

ವಲಯ ಮಟ್ಟದಲ್ಲಿ ಉಡುಪಿ ನಂ.1

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 9:45 IST
Last Updated 3 ಸೆಪ್ಟೆಂಬರ್ 2011, 9:45 IST

ಉಡುಪಿ (ಕಟಪಾಡಿ): `ಭಾರತೀಯ ಜೀವ ವಿಮಾ ನಿಗಮದ ಉಡುಪಿ ವಿಭಾಗವು 2011-12ರ ಸಾಲಿನ ಎಲ್.ಐ.ಸಿ. ಪಾಲಿಸಿ ಸಂಗ್ರಹಣೆಯಲ್ಲಿ ವಲಯ ಮಟ್ಟದಲ್ಲಿ ಮೊದಲ ಸ್ಥಾನ ಹಾಗೂ ಅಖಿಲ ಭಾರತ ಮಟ್ಟದಲ್ಲಿ 7ನೇ ಸ್ಥಾನದಲ್ಲಿದೆ~ ಎಂದು ಎಲ್.ಐ.ಸಿ ಯ ಹಿರಿಯ ವಲಯ ಪ್ರಬಂಧಕ ಎನ್.ಎಸ್. ಶಿರಹಟ್ಟಿ ಹೇಳಿದರು
ಎಲ್.ಐ.ಸಿ. 55ನೇ ವರ್ಷಾಚರಣೆ ಹಾಗೂ ಎಲ್.ಐ.ಸಿ. ಸಪ್ತಾಹದ ಅಂಗವಾಗಿ ಅವರು ಉಡುಪಿ ವಲಯ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿ ಎಲ್.ಐ.ಸಿ. ಸಾಧನೆಯನ್ನು ವಿವರಿಸಿದರು.

ಉಡುಪಿ ವಿಭಾಗವು 30 ಲಕ್ಷಕ್ಕಿಂತಲೂ ಅಧಿಕ ಪಾಲಿಸಿದಾರರಿಗೆ ಪ್ರಾಮಾಣಿಕ ಹಾಗೂ ಯಶಸ್ವಿ ಸೇವೆ ನೀಡುತ್ತಿದೆ. ಪ್ರೀಮಿಯಂ ಪಾವತಿದಾರರಿಗೆ ಇ.ಸಿ.ಎಸ್, ಎ.ಟಿ.ಎಮ್, ಇ-ಬ್ಯಾಂಕಿಂಗ್, ಅಲ್ಲದೆ 94 ಪ್ರತಿನಿಧಿಗಳನ್ನು ಹಾಗೂ 4 ಎಸ್.ಬಿ.ಎ. ಗಳನ್ನು ನಿಯೋಜಿಸಲಾಗಿದೆ. ಆ್ಯಕ್ಸಿಸ್ ಬ್ಯಾಂಕ್ ಮತ್ತು ಕಾರ್ಪೋರೇಶನ್ ಬ್ಯಾಂಕ್‌ಗಳ ಮೂಲಕ ಪ್ರೀಮಿಯಂ ಪಾವತಿ ಅವಕಾಶವಿದೆ~ ಎಂದರು.

`ಪೆನ್ಶನ್ ಪ್ಲಸ್~, `ಜೀವನ್ ಆರೋಗ್ಯ~ ದಂತಹ ಹೊಸ ಪಾಲಿಸಿಗಳು ಜನಪ್ರಿಯಗೊಳ್ಳುತ್ತಿದೆ. ಬಿಮಾ ಬಚತ್ ಪಾಲಿಸಿ ಮಾರಾಟದಲ್ಲಿ ಉಡುಪಿ ವಲಯದಲ್ಲಿ 3ನೇ ಸ್ಥಾನ ಮತ್ತು ರಾಜ್ಯದಲ್ಲಿ ನಂ.1 ಸ್ಥಾನದಲ್ಲಿದೆ. ದೇಶದ ಗ್ರಾಮಾಂತರ ವಿಭಾಗದಲ್ಲೊಂದಾದ ಉಡುಪಿ ವಿಭಾಗದಲ್ಲಿ 2010-11ರಲ್ಲಿ ಒಟ್ಟು 3,35,189 ಪಾಲಿಸಿಗಳು ಮಾರಾಟವಾಗಿದ್ದು, ರೂ 31,319 ಕೋಟಿ ಪ್ರಥಮ ಪ್ರೀಮಿಯಂ ಆದಾಯ ಕಂಡು ಬಂದಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ 1,12,473 ಪಾಲಿಸಿಗಳು ಮಾರಾಟವಾಗಿದ್ದು, ಪ್ರಥಮ ಪ್ರೀಮಿಯಂ  ರೂಪದಲ್ಲಿ ರೂ 76.03 ಕೋಟಿ ಸಂಗ್ರಹವಾಗಿದೆ. ಪಿಂಚಣಿ ಹಾಗೂ ಗುಂಪು ವಿಮೆಯಲ್ಲಿ ಒಟ್ಟು 279 ಸ್ಕೀಮುಗಳಿದ್ದು, ಒಟ್ಟು  67,102 ಚಾಲನೆಯಲ್ಲಿವೆ. ಇದರಲ್ಲಿ ಪ್ರಥಮ ಪ್ರೀಮಿಯಂ ನಲ್ಲಿ 267.57 ಕೋಟಿ ಸಂಗ್ರಹವಾಗಿದೆ. ಇದೇ ವಿಭಾಗದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 110 ಒಟ್ಟು ಸ್ಕೀಮುಗಳ ಪೈಕಿ 17,119 ಚಾಲ್ತಿಯಲ್ಲಿರುವ ಪಾಲಿಸಿಗಳಿಂದ ಪ್ರಥಮ ಪ್ರೀಮಿಯಂ  ರೂಪದಲ್ಲಿ 451.02ಕೋಟಿ ಸಂಗ್ರಹವಾಗಿದೆ~ ಎಂದರು.

`ಈ ವರ್ಷ ಸೂಕ್ಷ್ಮ ವಿಮೆಯಲ್ಲಿ 42,817 ಪಾಲಿಸಿಗಳ ಮೂಲಕ ಪ್ರಥಮ ಪ್ರೀಮಿಯಂ 2.86 ಕೋಟಿ ಸಂಗ್ರಹವಾಗಿದೆ. ಈ ಆರ್ಥಿಕ ವರ್ಷದಲ್ಲಿ ಸುಮಾರು ರೂ 300 ಕೋಟಿ ದಾವೆ ಪಾವತಿಯನ್ನು ಅಂದಾಜಿಸಲಾಗಿದೆ~ ಎಂದರು. ಮಾರ್ಕೆಟಿಂಗ್ ಮ್ಯೋನೇಜರ್ ಬಿ.ಡಿ.ಅಲ್ಮೇಡಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.