ADVERTISEMENT

ಸಶಸ್ತ್ರ ಪಡೆಗಳ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 6:49 IST
Last Updated 25 ಏಪ್ರಿಲ್ 2013, 6:49 IST

ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿ ಸಿರುವುದು ಸಾಮಾನ್ಯ. ಹೀಗೆ ನಿಯೋಜಿಸುವಾಗಲೂ ಕೆಲವೊಂದು ನಿಯಮಗಳಿವೆ. ನಕ್ಸಲ್ ಪೀಡಿತ ಪ್ರದೇಶಗಳು, ವಿಚ್ಛಿದ್ರಕಾರರ ಹಾವಳಿ ಇರುವ ಪ್ರದೇಶಗಳಲ್ಲಿ ಕೇಂದ್ರೀಯ ಸಶಸ್ತ್ರ ಪಡೆಗಳನ್ನು (ಸಿಪಿಎಫ್) ವಿಭಜಿಸದೆ ಪೂರ್ಣ ಪ್ರಮಾಣದಲ್ಲಿ ನಿಯೋಜಿಸಬೇಕು.

ಇಂತಹ ಕಡೆಗಳಲ್ಲಿ ಕೇಂದ್ರೀಯ ಪಡೆಗಳು ಮೊದಲಾಗಿ ಜನರಲ್ಲಿ ವಿಶ್ವಾಸ ಮೂಡಿಸಲು ಪಥಸಂಚಲನ ನಡೆಸಿರಬೇಕು. ಅಭ್ಯರ್ಥಿಗಳಿಗೆ ಬೆದರಿಕೆ ಇದ್ದರೆ, ಅದನ್ನು ಪರಿಶೀಲಿಸಿ ಭದ್ರತೆ ಒದಗಿಸಬಹುದು. ಆದರೆ ಚುನಾವಣಾ ವೀಕ್ಷಕರಾಗಿ ಬಂದವರಿಗೆ ಬಿಗಿ ಭದ್ರತೆ ಒದಗಿಸಬೇಕು.

ಶಸ್ತ್ರಾಸ್ತ್ರ ಸಾಗಣೆ ಮತ್ತು ದುಷ್ಕರ್ಮಿಗಳ ಬರುವಿಕೆಯನ್ನು ನಿಯಂತ್ರಿಸುವುದಕ್ಕಾಗಿ ಚುನಾವಣೆಗೆ ಮೊದಲಾಗಿಯೇ ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಬೇಕು. ಮತಪೆಟ್ಟಿಗೆಗಳನ್ನು ಇಟ್ಟಿರುವ ಪ್ರದೇಶಗಳಲ್ಲಿ ಸಿಪಿಎಫ್‌ಗಳನ್ನೇ ನಿಯೋಜಿಸಬೇಕು. ಸಿಪಿಎಫ್ ಇಲ್ಲದಲ್ಲಿ ಮಾತ್ರ ರಾಜ್ಯ ಸಶಸ್ತ್ರ ಪಡೆಯನ್ನು ನಿಯೋಜಿಸಬಹುದಷ್ಟೇ. ಮತಗಟ್ಟೆಯ ಸೂಕ್ಷ್ಮತೆಗೆ ತಕ್ಕಂತೆ ಕೇಂದ್ರೀಯ ಸಶಸ್ತ್ರ, ರಾಜ್ಯ ಸಶಸ್ತ್ರ ಪಡೆ, ಜಿಲ್ಲಾ ಸಶಸ್ತ್ರ ಪಡೆಗಳನ್ನು ನಿಯೋಜಿಸಬೇಕು.

ಮತದಾನ ಕೊನೆಗೊಂಡ ನಂತರ ಮತಯಂತ್ರಗಳು ಮತ್ತು ಸಿಬ್ಬಂದಿ ಯನ್ನು ಮರಳಿ ತರುವಾಗ ಕೇಂದ್ರೀಯ ಪಡೆಗಳ ಬೆಂಗಾವಲು ಕಡ್ಡಾಯ. ಕೇಂದ್ರೀಯ ಪಡೆಗಳ ನಿಯೋಜನೆಗೆ ಗುರುತಿಸಲಾದ ಮತಗಟ್ಟೆಗಳಲ್ಲಿ ಅವರೇ ಇರಬೇಕು. ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಪತ್ರಿಕಾ ಛಾಯಾ ಗ್ರಾಹಕರು ಇಂತಹ ಮತಗಟ್ಟೆಯೊಳಗೆ ತೆರಳಿ ಛಾಯಾಚಿತ್ರ ತೆಗೆಯುವಂತಿಲ್ಲ ಇಷ್ಟೆಲ್ಲ ಆಗಿ ಕೊನೆಗೆ ಮತದಾನ ವಾಗುತ್ತದಲ್ಲ, ಈ ಮತಗಟ್ಟೆಯಲ್ಲಿ ಮತದಾರರಿಗೆ ಮತ ಚಲಾಯಿ ಸುವುದು ಸಾಧ್ಯವಾಯಿತೇ, ಇಲ್ಲವೇ ಎಂಬ ವರದಿ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT