ADVERTISEMENT

‘ಪೋಷಕರ ಜವಾಬ್ದಾರಿಯಿಂದ ಮಕ್ಕಳ ಪ್ರಗತಿ'

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 9:43 IST
Last Updated 16 ಸೆಪ್ಟೆಂಬರ್ 2013, 9:43 IST

ಬ್ರಹ್ಮಾವರ: ಮಕ್ಕಳು ದಿನದ ಹೆಚ್ಚಿನ ಸಮಯವನ್ನು ಪೋಷಕರೊಂದಿಗೆ ಕಳೆ ಯುತ್ತಿದ್ದು, ಮಕ್ಕಳನ್ನು ಸತ್ಪ್ರಜೆಯನ್ನಾಗಿ ರೂಪಿಸುವಲ್ಲಿ ಶಿಕ್ಷಕರೊಂದಿಗೆ ಪೋಷ ಕರು ಕೂಡಾ ಜವಾಬ್ದಾರರಾ ಗಿರುತ್ತಾರೆ ಎಂದು ಸಚಿವ ವಿನಯ ಕುಮಾರ ಸೊರಕೆ  ಹೇಳಿದರು.

ಬ್ರಹ್ಮಾವರ ವಲಯದ ಬಾಳೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಅಕ್ಷರ ದಾಸೋಹ ಕಟ್ಟಡಕ್ಕೆ ಶಿಲಾನ್ಯಾಸ ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕಾಲಕಾಲಕ್ಕೆ ಮಕ್ಕಳ ಪ್ರಗತಿಯನ್ನು ಶಿಕ್ಷಕರೊಂದಿಗೆ ವಿಚಾರಿಸುತ್ತಾ ಮಕ್ಕಳ ಕಲಿಕೆಯ ಮಟ್ಟವನ್ನು ಅರಿತುಕೊಂಡು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರು ನೆರವಾಗಬೇಕು ಎಂದು ಅವರು ಕರೆ ನೀಡಿದರು.

ಪೆರ್ಡೂರು ಪಂಚಾಯಿತಿ ಅಧ್ಯಕ್ಷ ಶಿವರಾಮ ಶೆಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬೇಬಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಮ ಕುಲಾಲ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯಕುಲಾಲ, ಉದ್ಯಮಿ ಗಳಾದ ಶಾಂತರಾಮ ಸೂಡ, ದಿನೇಶ್ಚಂದ್ರ, ಪಾಂಡುರಂಗ ಶೇಟ್ ಮತ್ತಿತರರು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಲಲಿತಾ ಸ್ವಾಗತಿಸಿದರು. ಸಹಶಿಕ್ಷಕ ದಿನೇಶ್ ವಂದಿಸಿದರು. ಶಿಕ್ಷಕಿ ಪ್ರಭಾ ಎಸ್. ಭಟ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.