ಬ್ರಹ್ಮಾವರ: ಹೆಚ್ಚಿನ ಸಾಧಕರು ಕನ್ನಡ ಭಾಷೆಯಲ್ಲಿ ಓದಿ ತಮ್ಮ ಗುರಿಯನ್ನು ಸಾಧಿಸಿದ್ದಾರೆ. ಮಾತೃಭಾಷೆಯಲ್ಲಿ ಓದಿದರೆ ಸಾಧನೆಗೆ ಯಾವುದೇ ಅಡೆತಡೆ ಆಗುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಪಡು ನೀಲಾವರದಲ್ಲಿ ಭಾನುವಾರ ಪಡು ನೀಲಾವರ ಫ್ರೆಂಡ್ಸ್ ವತಿಯಿಂದ ನೀಲಾವರ ಮೇಳದ ಯಕ್ಷಗಾನದ ಸಂದರ್ಭ ಹುಟ್ಟೂರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಂದಿನ ಯುವ ಜನಾಂಗ ಎಷ್ಟೇ ಸಾಧನೆಗಳನ್ನು ಮಾಡಿದರೂ ತಮ್ಮ ಹುಟ್ಟೂರು, ಗ್ರಾಮವನ್ನು ಮರೆಯಬಾರದು. ಕನ್ನಡ ಭಾಷೆಯನ್ನು ಮರೆಯದೇ ಅದನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಿಂದ ಆಗಬೇಕಾಗಿದೆ ಎಂದರು.
ಸಮಾರಂಭದಲ್ಲಿ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ನೀಲಾವರ ರಾಜಾರಾಂ ಆಚಾರ್ಯ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ನೀಲಾವರ ಸೂರ್ಯನಾರಾಯಣ ಭಟ್, ಕುಂಜಾಲು ವಿಶ್ವಕೀರ್ತಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪದ್ಮನಾಭ ಅಡಿಗ, ಕುಂಜಾಲು ಗ್ರಾ.ಪಂ ಉಪಾಧ್ಯಕ್ಷ ಗುರುರಾಜ ಮಕ್ಕಿತ್ತಾಯ, ಕಾರ್ಯಕ್ರಮದ ಸಂಘಟಕರಾದ ಬಾವ್ತೀಸ್ ಡಿಸೋಜಾ, ದೇವದಾಸ ಆಚಾರ್ಯ, ಪಿಯೂಸ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ಪ್ರಶಾಂತ್ ನೀಲಾವರ ಕಾರ್ಯಕ್ರಮ ನಿರೂಪಿಸಿದರು. ಚೈತನ್ಯ ಯುವಕ ಮಂಡಲದ ಸದಸ್ಯರು ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.