ಬ್ರಹ್ಮಾವರ: ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರು ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯುವ ವೇದಿಕೆ ಮತ್ತು ದುರ್ಗಾಪರಮೇಶ್ವರಿ ಮಹಿಳಾ ವೇದಿಕೆಯ ವತಿಯಿಂದ ದೇವಸ್ಥಾನದ ಕೂಡುಕಟ್ಟಿಗೆ ಸೇರಿದ 5ನೇ ತರಗತಿಯಿಂದ ಪದವಿಯವರೆಗೆ ಮೂರು ವಿಭಾಗದಲ್ಲಿ ಅಂದದ ಕೈಬರಹ ಹಾಗೂ ಪ್ರಬಂಧ ಸ್ಪರ್ಧೆ ‘ಅಕ್ಷರ ಸಿರಿ’ ಕಾರ್ಯಕ್ರಮ ನಡೆಯಿತು.
ಸ್ಪರ್ಧೆಯಲ್ಲಿ ಒಟ್ಟು 23 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ವಿಭಾಗದಲ್ಲಿ ಶ್ವೇತಾಂಶ್ ಚೇರ್ಕಾಡಿ, ನಿರೀಕ್ಷಾ ಶೆಟ್ಟಿಗಾರ್, ಕಿಶನ್ ಸಾಸ್ತಾನ. ದ್ವಿತೀಯ ವಿಭಾಗದಲ್ಲಿ ಆರಾಧ್ಯ ಶೆಟ್ಟಿಗಾರ ನೀಲಾವರ, ಹರ್ಷಿತಾ ಬ್ರಹ್ಮಾವರ, ಐಶ್ವರ್ಯ ಜಪ್ತಿ. ತೃತೀಯ ವಿಭಾಗದಲ್ಲಿ ಧನುಶ್ರೀ ಎಡಬೆಟ್ಟು, ಸ್ಮಿತಾ ಕೊಪ್ಪ, ಸಂಜನಾ ರಂಗನಕೇರಿ ಮತ್ತು ಉಳಿದವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಇದೇ ಸಂದರ್ಭ ದೇವಸ್ಥಾನದಲ್ಲಿ 234ನೇ ಮಾಸಿಕ ಸತ್ಯನಾರಾಯಣ ಪೂಜೆ, ಶತರುದ್ರಾಭಿಷೇಕ, ಮೂಡು ಗಣಪತಿ, ಪರಿವಾರ ದೈವಗಳಿಗೆ ವಿಶೇಷ ಪೂಜೆಯನ್ನು ಸೇವಾ ಕರ್ತರಾದ ಬಾರ್ಕೂರು ರಂಗನಕೇರಿ ಯಶೋದ ಮತ್ತು ಶ್ರೀನಿವಾಸ ಶೆಟ್ಟಿಗಾರ ನೆರವೇರಿಸಿದರು.
ಸೇವೆಯಿಂದ ನಿವೃತ್ತರಾದ ಜಯರಾಮ ಶೆಟ್ಟಿಗಾರ ಸಂತೆಕಟ್ಟೆ, ಶಶಿಧರ ಶೆಟ್ಟಿಗಾರ ಬಾರ್ಕೂರು, ಶೋಭಾ ಅರುಣ ಶೆಟ್ಟಿಗಾರ ಕೆಳಾರ್ಕಳಬೆಟ್ಟು ಅವರನ್ನು ಗೌರವಿಸಲಾಯಿತು.
ದೇವಸ್ಥಾನದ ಧರ್ಮದರ್ಶಿ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿಗಾರ ಸಂತೆಕಟ್ಟೆ, ಸಂಘಟನಾ ಸಮಿತಿ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್ ಸಂತೆಕಟ್ಟೆ, ಗುರಿಕಾರರಾದ ಶ್ರೀನಿವಾಸ ಶೆಟ್ಟಿಗಾರ ಕೊಳಂಬೆ, ಸಹ ಮೊಕ್ತೇಸರ ಜನಾರ್ದನ ಶೆಟ್ಟಿಗಾರ್ ವಕ್ವಾಡಿ, ದುರ್ಗಾಪರಮೇಶ್ವರಿ ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಾವತಿ ಸದಾಶಿವ ಶೆಟ್ಟಿಗಾರ, ಕಾರ್ಯದರ್ಶಿ ಜನಾರ್ದನ ಶೆಟ್ಟಿಗಾರ ಚೇರ್ಕಾಡಿ, ಬ್ರಹ್ಮಲಿಂಗ ವೀರಭದ್ರ ಪದ್ಮಶಾಲಿ, ಶೆಟ್ಟಿಗಾರ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸುಧಾಕರ ವಕ್ವಾಡಿ ಇದ್ದರು.
ಯುವ ವೇದಿಕೆ ಅಧ್ಯಕ್ಷ ಸಂಜೀವ ಶೆಟ್ಟಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಲತಾ ಪ್ರವೀಣ ಶೆಟ್ಟಿಗಾರ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ಟ್ರಸ್ಟ್ ಕಾರ್ಯದರ್ಶಿ ಶಿವಪ್ರಸಾದ ಶೆಟ್ಟಿಗಾರ ಉಡುಪಿ ನಿರೂಪಿಸಿದರು. ಭಾಸ್ಕರ ಶೆಟ್ಟಿಗಾರ ಸಾಸ್ತಾನ ಸ್ವಾಗತಿಸಿದರು. ಚಂದ್ರಶೇಖರ ಶೆಟ್ಟಿಗಾರ ಹೊಸಾಳ ಬಾರ್ಕೂರು ಆಯವ್ಯಯ ಮಂಡಿಸಿದರು. ಕಾರ್ಯದರ್ಶಿ ಜನಾರ್ದನ ಶೆಟ್ಟಿಗಾರ ವರದಿ ವಾಚಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.