ಹೆಬ್ರಿ: ರೋಟರಿ ಸಮುದಾಯದಳ ಹೆಬ್ರಿ, ರೋಬೋಸಾಫ್ಟ್ ಟೆಕ್ನಾಲಜಿಸ್ ಉಡುಪಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ರೋಟರಿ ಕ್ಲಬ್ ಮಣಿಪಾಲ, ಹೆಬ್ರಿ ಗ್ರಾಮ ಪಂಚಾಯಿತಿ ಧನಲಕ್ಷ್ಮಿ ಸಂಜೀವಿನಿ ಒಕ್ಕೂಟದ ಆಶ್ರಯದಲ್ಲಿ ಹತ್ತು ದಿನಗಳ ಕೃತಕ ಆಭರಣ ಮತ್ತು ಆಲಂಕಾರಿಕ ಕರಕುಶಲ ವಸ್ತುಗಳ ತಯಾರಿಕಾ ತರಬೇತಿಯು ಹೆಬ್ರಿಯ ಸಮುದಾಯ ಭವನದಲ್ಲಿ ನಡೆಯಿತು.
ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ್ ಎಸ್.ಬಂಗೇರ ಕಾರ್ಯಕ್ರಮ ಉದ್ಘಾಟಿಸಿದರು.
ಭಾರತೀಯ ವಿಕಾಸ ಟ್ರಸ್ಟ್ ಹಿರಿಯ ಸಲಹೆಗಾರ ಜಗದೀಶ್ ಪೈ, ಮಣಿಪಾಲ ರೋಟರಿ ಕಾರ್ಯದರ್ಶಿ ಫರೀದಾ ಉಪ್ಪಿನ್, ಪ್ರಮುಖರಾದ ರಾಜವರ್ಮ ಅರಿಗ, ಹೆಬ್ರಿ ಸಮುದಾಯ ದಳದ ಅಧ್ಯಕ್ಷ ಕೃಷ್ಣರಾಜ್ ಕೆ.ವೆಂಕಟಾಪುರ, ಅಧ್ಯಕ್ಷ ರಾಮಕೃಷ್ಣ ಆಚಾರ್, ಉಮಾ, ಶಕುಂತಲಾ, ರಶ್ಮಿ ಭಟ್ ಭಾಗವಹಿಸಿದ್ದರು. ನಿತ್ಯಾನಂದ ಭಟ್ ಸ್ವಾಗತಿಸಿ, ನಿರೂಪಿಸಿದರು. ನಾಗನಂದಿನಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.