ಬೈಂದೂರು: ಯಕ್ಷಗಾನ, ತಾಳಮದ್ದಳೆ, ಹೂವಿನಕೋಲು ಮುಂತಾದವುಗಳು ಪರಂಪರೆಯ ಭಾಗವಾಗಿದ್ದು ಮಹಾಕಾವ್ಯಗಳನ್ನು ಜನರಿಗೆ ತಲುಪಿಸಲು ಉತ್ತಮ ಮಾಧ್ಯಮ ಎಂದು ನಿವೃತ್ತ ಸೈನಿಕ, ಬರಹಗಾರ ಚಂದ್ರಶೇಖರ ನಾವಡ ಹೇಳಿದರು.
ಬೈಂದೂರಿನ ಲಾವಣ್ಯ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ಸೇನೇಶ್ವರ ದೇವಸ್ಥಾನ, ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಆಶ್ರಯದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ ಉದ್ಘಾಟಿಸಿ ಅವರು ಮಾತನಾಡಿದರು.
ತಾಳಮದ್ದಲೆ ಕಲೆ ಇತ್ತೀಚೆಗೆ ಅಪರೂಪವಾಗುತ್ತಿದೆ. ಯುವಜನತೆಯಲ್ಲಿ ಈ ಕಲೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದ್ದು ಇದರ ಮಹತ್ವವನ್ನು ಅರಿತು ಉಳಿಸಿ ಬೆಳೆಸಬೇಕು ಎಂದು ಅವರು ಹೇಳಿದರು.
ಲಾವಣ್ಯದ ಅಧ್ಯಕ್ಷ ನರಸಿಂಹ ಬಿ.ನಾಯಕ್, ಹಿರಿಯ ಕಲಾವಿದ ಗಣೇಶ ಕಾರಂತ್, ಬೈಂದೂರು ವೃತ್ತ ನಿರೀಕ್ಷಕ ಸವಿತ್ರತೇಜ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಧಾಕರ ಯಡ್ತರೆ, ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ರಾಘವೇಂದ್ರ ಬಿ.ಕೆ, ಚಂದ್ರ ಯಡ್ತರೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.