ADVERTISEMENT

ಉಡುಪಿ: ಹೊಳೆಯುವ ಸಮುದ್ರತೀರ ವೀಕ್ಷಿಸಲು ಜನಜಂಗುಳಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 15:18 IST
Last Updated 26 ನವೆಂಬರ್ 2020, 15:18 IST
ಮಲ್ಪೆಯ ಪಡುಕೆರೆ ಸಮುದ್ರ ಹೊಳೆಯುತ್ತಿರುವುದು.ಚಿತ್ರಕೃಪೆ: ಫೋಕಸ್ ರಾಘು
ಮಲ್ಪೆಯ ಪಡುಕೆರೆ ಸಮುದ್ರ ಹೊಳೆಯುತ್ತಿರುವುದು.ಚಿತ್ರಕೃಪೆ: ಫೋಕಸ್ ರಾಘು   

ಉಡುಪಿ: ರಾತ್ರಿಯ ಹೊತ್ತು ಹೊಳೆಯುವ ಕಡಲ ತೀರದದ ಕೌತುಕವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಬೀಚ್‌ಗಳಿಗೆ ಲಗ್ಗೆ ಇಡುತ್ತಿದ್ದಾರೆ. ಸೂರ್ಯ ಮುಳುಗುತ್ತಿದ್ದಂತೆ ಬೈಕ್‌, ಕಾರು, ವಾಹನಗಳಲ್ಲಿ ಮಲ್ಪೆಯ ಪಡುಕೆರೆ, ಮಟ್ಟು, ಕಾಪು ಬೀಚ್‌ಗಳಿಗೆ ಜನರು ದೌಡಾಯಿಸುತ್ತಿದ್ದಾರೆ.

ಬೀಚ್‌ಗೆ ತೆರಳುವ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಎದುರಾಗಿದ್ದು, ಮಧ್ಯರಾತ್ರಿವರೆಗೂ ಕಡಲ ಕಿನಾರೆಯ ಬದಿಯಲ್ಲಿ ಜನರು ನಿಂತು ಹೊಳೆಯುವ ನೀಲಿ ಸಮುದ್ರವನ್ನು ವೀಕ್ಷಣೆ ಮಾಡುತ್ತಿದ್ದಾರೆ. ಪಡುಕೆರೆ ಕಡಲ ತೀರದಲ್ಲಿ ಜನಜಂಗುಳಿ ಸೇರುತ್ತಿದ್ದು, ಮೊಬೈಲ್‌, ಕ್ಯಾಮೆರಾಗಳಲ್ಲಿ ಹೊಳೆಯುವ ಅಲೆಗಳನ್ನು ಕ್ಲಿಕ್ಕಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಮುದ್ರ ಕಿನಾರೆ ಹೊಳೆಯುವ ದೃಶ್ಯಗಳು ಹೆಚ್ಚು ಸುದ್ದಿಯಾದ ಬಳಿಕ ತೀರಗಳತ್ತ ಬರುವವರ ಸಂಖ್ಯೆ ಹೆಚ್ಚಾಗಿದೆ. ಮಧ್ಯರಾತ್ರಿವರೆಗೂ ಜನರು ತೀರದಲ್ಲಿ ಕಾಲ ಕಳೆಯುತ್ತಾರೆ ಎನ್ನುತ್ತಾರೆ ಸ್ಥಳೀಯರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.