ADVERTISEMENT

ಬಹಿಷ್ಕಾರ ಎಚ್ಚರಿಕೆ: ತೆಂಕಬೆಟ್ಟಿಗೆ ಇಒ ಭೇಟಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 5:59 IST
Last Updated 14 ಮಾರ್ಚ್ 2023, 5:59 IST
ಹೆಬ್ರಿಯ ಚಾರ ಗ್ರಾಮದ ತೆಂಕಬೆಟ್ಟಿನಲ್ಲಿ ಮತದಾನ ಬಹಿಷ್ಕಾರ ಬ್ಯಾನರ್‌ ಹಾಕಿದ ಪ್ರದೇಶಕ್ಕೆ ಹೆಬ್ರಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಶಶಿಧರ್ ಕೆ.ಜಿ. ಸೋಮವಾರ ಭೇಟಿ ನೀಡಿದರು
ಹೆಬ್ರಿಯ ಚಾರ ಗ್ರಾಮದ ತೆಂಕಬೆಟ್ಟಿನಲ್ಲಿ ಮತದಾನ ಬಹಿಷ್ಕಾರ ಬ್ಯಾನರ್‌ ಹಾಕಿದ ಪ್ರದೇಶಕ್ಕೆ ಹೆಬ್ರಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಶಶಿಧರ್ ಕೆ.ಜಿ. ಸೋಮವಾರ ಭೇಟಿ ನೀಡಿದರು   

ಹೆಬ್ರಿ: ಚಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂಕಬೆಟ್ಟು ಗ್ರಾಮಕ್ಕೆ ಹೆಬ್ರಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಶಶಿಧರ್ ಕೆ.ಜಿ. ಭೇಟಿನೀಡಿ ಜನರ ಜೊತೆ ಸಂವಾದ ನಡೆಸಿದರು.

ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಎರಡು ದಿನಗಳ ಹಿಂದೆ, ಸ್ಥಳೀಯರು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿ ಈ ಬಗ್ಗೆ ಗ್ರಾಮದಲ್ಲಿ ಬ್ಯಾನರ್ ಅಳವಡಿಸಿದ್ದರು.

ಸ್ಥಳ ಪರಿಶೀಲನೆ ನಡೆಸಿದ ಶಶಿಧರ್ ಕೆ.ಜಿ. ಬೊರ್‌ವೆಲ್‌ ಅಳವಡಿಸಿದ ಜಾಗ, ರಸ್ತೆ ಸಂಪರ್ಕದ ಕುರಿತು ಪರಿಶೀಲನೆ ನಡೆಸಿ ಜನರ ಮನವೊಲಿಸಲು ಪ್ರಯತ್ನಿಸಿದರು.

ADVERTISEMENT

‘ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ವಿಚಾರವಾಗಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ರಸ್ತೆ ನಿರ್ಮಾಣಕ್ಕೆ ಅರಣ್ಯ ನಿಯಮಗಳು ತೊಡಕಾಗಿರುವುದರಿಂದ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ. ಸಾಧ್ಯವಾದಷ್ಟು ಮಟ್ಟಿಗೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು’ ಎಂದು ಅವರು ಭರವಸೆ ನೀಡಿದರು.

ನಮ್ಮ ಸಮಸ್ಯೆ ಬಗೆಹರಿಯುವವರೆಗೆ ಬ್ಯಾನರ್ ತೆರವುಗೋಳಿಸುವುದಿಲ್ಲ. ನಮ್ಮನ್ನು ಓಲೈಸಲು ಬರಬೇಡಿ. ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿದ ನಂತರವೇ ನಮ್ಮ ಹಕ್ಕು ಚಲಾಯಿಸುತ್ತೇವೆ ಎಂದು ಊರಿನ ಜನ ಹೇಳಿದ್ದಾರೆ.

ರಿತೇಶ್ ಶೆಟ್ಟಿ, ಮಧುಕರ ನಾಯ್ಕ್, ಸುಂದರ ಶೆಟ್ಟಿ, ಮಹಾಬಲ ನಾಯ್ಕ, ಹೇಮಾ ಶೆಟ್ಟಿ, ಯಶೋದಾ ಪೂಜಾರಿ, ಅಮಿತಾ ಪೂಜಾರಿ, ಚೈತ್ರಾ ಶೆಟ್ಟಿ, ಸೀತಾರಾಮ ಶೆಟ್ಟಿ, ವನಜಾ ಶೆಟ್ಟಿ, ನಾಗರಾ ಶೆಟ್ಟಿ, ರಮೇಶ ಪೂಜಾರಿ, ಪಾರ್ವತಿ ಶೆಟ್ಟಿ, ಜ್ಯೋತಿ ಪೂಜಾರಿ, ಲತಾ, ಕೃಷ್ಣ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.