ಬ್ರಹ್ಮಾವರ: ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆವರಣದಲ್ಲಿರುವ ಕೂಟ ಬಂಧು ಭವನದಲ್ಲಿ ಸಾಹಿತಿ ವಾಣಿಶ್ರೀ ಅಶೋಕ ಐತಾಳರ ನಾಲ್ಕು ಕಥಾ ಸಂಕಲನಗಳ ಅನಾವರಣ ಕಾರ್ಯಕ್ರಮ ಈಚೆಗೆ ನಡೆಯಿತು.
ಸಾಹಿತಿ ಉಪೇಂದ್ರ ಸೋಮಯಾಜಿ ಮಾತನಾಡಿ, ‘ಸುತ್ತಮುತ್ತಲಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಾಗೂ ಓದುಗನ ಮನಸ್ಸನ್ನು ಅರಳಿಸುವ ಸಾಹಿತ್ಯ ರಚನೆಯ ಅಗತ್ಯತೆ ಇದೆ’ ಎಂದರು.
ಇದೇ ಸಂದರ್ಭ ಹೊನ್ನಾವರದ ಸಹಶಿಕ್ಷಕ ಗಣೇಶ ಹೆಗಡೆ ಅವರು ‘ನಿನಗಾಗಿ ಹೇಳುವೆ ಕಥೆ ನೂರನು’ ಎಂಬ ಕಥಾಸಂಕಲನ, ಸುವೃತ ಅಡಿಗ ಅವರು ‘ಗೆಜ್ಜೆ’ ಕಥಾಸಂಕಲನ, ಸುಮನ ಹೇರಳೆ ಅವರು ‘ಹೆಜ್ಜೆ’ ಕಥಾಸಂಕಲನ ಹಾಗೂ ಹನಿ ಇಬ್ಬನಿ ಎಂಬ ಕಥಾಸಂಕಲನವನ್ನು ಮಂಜುನಾಥ ಮರವಂತೆ ಪರಿಚಯಿಸಿದರು.
ಉಡುಪಿ ಡಾ.ಟಿ.ಎಂ.ಎ.ಪೈ ಮಹಾ ವಿದ್ಯಾಲಯದ ಸಮನ್ವಯಾಧಿಕಾರಿ ಡಾ.ಮಹಾಬಲೇಶ್ವರ ರಾವ್, ಡಯಟ್ ಪ್ರಾಂಶುಪಾಲ ಡಾ.ಅಶೋಕ ಕಾಮತ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ಸೀತಾರಾಮ ಶೆಟ್ಟಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ನಿವೃತ್ತ ಉಪನ್ಯಾಸಕಿ ಪಾರ್ವತಿ ಜಿ. ಐತಾಳ ಹಾಗೂ ಸಹ ಶಿಕ್ಷಕ ಸುರೇಶ ಮರಕಾಲ ಅವರು, ಕಥೆಗಾರ್ತಿಗೆ ಶುಭ ಹಾರೈಸಿದರು.
ಕುಂದಾಪುರದ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಅಶೋಕ ಐತಾಳ, ಸಂಪನ್ಮೂಲ ವ್ಯಕ್ತಿ ಸಾಲಿಗ್ರಾಮ ಕಾರ್ಕಡದ ಸವಿತಾ ಇದ್ದರು. ಈ ಸಂದರ್ಭ ಗುರುಗಳಿಗೆ, ಹೆತ್ತವರಿಗೆ ಗೌರವ ಸಮರ್ಪಣೆ ನಡೆಸಲಾಯಿತು. ಬೀಜಾಡಿ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಅರ್ಪಣಾ ಬಾಯಿ ಕಾರ್ಯಕ್ರಮ ನಿರ್ವಹಿಸಿದರು. ಕಥೆಗಾರ್ತಿ ವಾಣಿಶ್ರೀ ಅಶೋಕ ಐತಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಅವನೀಶ ಐತಾಳ ಸ್ವಾಗತಿಸಿದರು. ರಾಜಶ್ರೀ ತಂತ್ರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.