ಬ್ರಹ್ಮಾವರ: ಇಲ್ಲಿನ ಆಶ್ರಯ ಹೋಟೆಲ್ ಸಭಾಂಗಣದಲ್ಲಿ ಉಡುಪಿ ಜಿಲ್ಲೆಯ ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ 21ನೇ ವಾರ್ಷಿಕ ಮಹಾಸಭೆ ಎಸ್. ಜಯರಾಮ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಸ್ಥಾಪಕಾಧ್ಯಕ್ಷ ವಿ.ಸುಬ್ಬಯ್ಯ ಹೆಗ್ಡೆ, ನಿಕಟ ಪೂರ್ವ ಅಧ್ಯಕ್ಷ ಎಸ್. ಅಣ್ಣಪ್ಪ ಶೆಟ್ಟಿ ಮತ್ತು ಪದಾಧಿಕಾರಿಗಳು ಬ್ಯಾ೦ಕ್‌ನ ಸ್ಥಾಪಕಾಧ್ಯಕ್ಷ ಎ.ಬಿ.ಶೆಟ್ಟಿ ಮತ್ತು ಬ್ಯಾ೦ಕ್‌ನ ಅಭಿವೃದ್ಧಿಯ ರೂವಾರಿ ಮುಲ್ಕಿ ಸುಂದರ ರಾಮ ಶೆಟ್ಟಿ ಅವರ ಭಾವಚಿತ್ರಗಳಿಗೆ ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ 75 ವರ್ಷ ಪೂರೈಸಿದ 23 ಹಿರಿಯ ಸದಸ್ಯರಿಗೆ ಸ್ಮರಣಿಕೆ ನೀಡಿ, ಸನ್ಮಾನಿಸಲಾಯಿತು. ನಿವೃತ್ತರ ಪರವಾಗಿ ಜಿ.ಎಂ.ಜಯರಾಮ ಶೆಟ್ಟಿ ಕೃತಜ್ಞತೆ ವ್ಯಕ್ತಪಡಿಸಿದರು.
ಸಂಘದ ಚಾರಿಟಿ ಫ೦ಡ್‌ನಿ೦ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಶೇ 90ಕ್ಕಿ೦ತ ಹೆಚ್ಚು ಅಂಕ ಗಳಿಸಿದ ಕನ್ನಡ ಮಾಧ್ಯಮದ ಅರ್ಹ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಲಾಯಿತು. ಮೆಡಿಕಲ್‌ನಲ್ಲಿ ಚಿನ್ನದ ಪದಕ ಪಡೆದ ನಮಿತಾ ಎಂ. ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಧನಪಾಲ ಶೆಟ್ಟಿ ಮತ್ತು ಎಸ್.ಶೇಖರ ಶೆಟ್ಟಿ ಹೊಸ ಸದಸ್ಯರಾಗಿ ಸೇರ್ಪಡೆಗೊಂಡರು. ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಯ ಕಾರ್ಯಕಾರಿ ಸಮಿತಿಗೆ ಚುನಾವಣಾಧಿಕಾರಿ ಎಚ್.ವಿಶ್ವನಾಥ ಹೆಗ್ಡೆ ಚುನಾವಣೆ ನಡೆಸಿದರು.
2025-27ನೇ ಸಾಲಿಗೆ ಅಧ್ಯಕ್ಷರಾಗಿ ಸಿ. ಸಚ್ಚಿದಾನಂದ ಶೆಟ್ಟಿ, ಉಪಾಧ್ಯಕ್ಷರಾಗಿ ವೇಣು ಗೋಪಾಲ ಶೆಟ್ಟಿ, ಕಾರ್ಯದರ್ಶಿಯಾಗಿ ಪಿ.ಮಂಜುನಾಥ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ರಮಾನಾಥ ಕೊಟ್ಟಾರಿ, ಖಜಾಂಚಿಯಾಗಿ ಸಂಪತ್ ಕುಮಾರ್ ಶೆಟ್ಟಿ ಮತ್ತು ಪದಾಧಿಕಾರಿಗಳಾಗಿ ಎ.ಭುಜಂಗ ಶೆಟ್ಟೆ, ಜಯರಾಮ ಎನ್. ಶೆಟ್ಟಿ, ನಾರಾಯಣ ಕೆ., ಎಸ್. ಜಯರಾಮ ಹೆಗ್ಡೆ, ಬಿ.ರತ್ನಾಕರ ಹೆಗ್ಡೆ, ಎಂ.ರತ್ನಾಕರ ಶೆಟ್ಟಿ, ಶಿವರಾಮ ಶೆಟ್ಟಿ, ನರೇಶ ಶೆಟ್ಟಿ, ವಿ.ಚಂದ್ರಶೇಖರ್ರ ಶೆಟ್ಟಿ ಆಯ್ಕೆಯಾದರು.
ಜಯರಾಮ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಸಂಕಯ್ಯ ಶೆಟ್ಟಿ ವರದಿ ಮಂಡಿಸಿದರು. ಕೋಶಾಧಿಕಾರಿ ಕೆ. ಬಾಲಕೃಷ್ಣ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಮಂಜುನಾಥ ಶೆಟ್ಟಿ ವಂದಿಸಿದರು. ಉದಯಕುಮಾರ್ ಶೆಟ್ಟಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.