
ಪ್ರಜಾವಾಣಿ ವಾರ್ತೆ
ಸಾಲಿಗ್ರಾಮ(ಬ್ರಹ್ಮಾವರ): ಸಾಲಿಗ್ರಾಮ ಪಾರಂಪಳ್ಳಿ ಪಡುಕರೆಯ ವಿನ್‌ಲೈಟ್ ಸ್ಪೋರ್ಟ್ಸ್ ಕ್ಲಬ್ ಆರನೇ ವರ್ಷದ ವಿನ್‌ಲೈಟ್ ಪುರಸ್ಕಾರಕ್ಕೆ ಸಾಂಪ್ರದಾಯಿಕ ಯಕ್ಷ ಕಲಾವಿದ ಕೋಟ ಸುರೇಶ ಬಂಗೇರ ಆಯ್ಕೆಯಾಗಿದ್ದಾರೆ.
ಪಾರಂಪಳ್ಳಿ ಪಡುಕರೆಯ ಪರಿಸರದಲ್ಲಿ ಇದೇ 27ರಂದು ಅಶಕ್ತ ಅನಾರೋಗ್ಯ ಪೀಡಿತರ ನೆರವಿಗಾಗಿ ಹಮ್ಮಿಕೊಂಡ ಪೆರ್ಡೂರು ಮೇಳದ ಯಕ್ಷ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಪುರಸ್ಕಾರ ನೀಡಲಾಗುವುದು. ಪ್ರಸಂಗಕರ್ತ ಪವನ್‌ಕಿರಣಕೆರೆ ನೇತೃತ್ವದಲ್ಲಿ ಅಶಕ್ತ ಅನಾರೋಗ್ಯ ಪೀಡಿತರ ಬಾಳಿನ ನೆರವಿಗಾಗಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.