ADVERTISEMENT

ಬ್ರಹ್ಮಾವರ: ವಿದ್ಯಾರ್ಥಿ ನಿಲಯದ ಆವರಣಕ್ಕೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 16:02 IST
Last Updated 12 ಜೂನ್ 2025, 16:02 IST
ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ಆವರಣದೊಳಗೆ ನುಗ್ಗಿರುವುದು
ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ಆವರಣದೊಳಗೆ ನುಗ್ಗಿರುವುದು   

ಬ್ರಹ್ಮಾವರ: ಹಂದಾಡಿ ಗ್ರಾ.ಪಂ. ವ್ಯಾಪ್ತಿಯ ಗಾಂಧಿ ಮೈದಾನದ ಯುವಜನ ಕ್ರೀಡಾ ಇಲಾಖೆಗೆ ಸಂಬಂಧಪಟ್ಟ ಆವರಣ ಗೋಡೆ ಭಾರಿ ಮಳೆಗೆ ಭಾಗಶಃ ಕುಸಿದು ಹಾನಿಯಾಗಿದೆ.

ಮಳೆಯ ನೀರಿನ ರಭಸಕ್ಕೆ ಗೋಡೆ ಕುಸಿದು, ನೀರು ಪಕ್ಕದಲ್ಲೇ ಇರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ಆವರಣದೊಳಗೆ ನುಗ್ಗಿ ಕೆಲ ಕಾಲ ವಿದ್ಯಾರ್ಥಿಗಳನ್ನು ಆತಂಕಕ್ಕೆ ಎಡೆ ಮಾಡಿತು. ತಕ್ಷಣ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಹಂದಾಡಿ ಪಂಚಾಯಿತಿ ಕಟ್ಟಡಕ್ಕೆ ಸ್ಥಳಾಂತರಗೊಳಿಸಿದರು.

ಕಂದಾಯ ಅಧಿಕಾರಿ ರಾಜು ಎಸ್., ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್‌.ವಿ.ಇಬ್ರಾಹಿಂಪುರ, ಗ್ರಾಮ ಕರಣಿಕ ಮಹೇಂದ್ರ ಆಚಾರ್ಯ, ಹಂದಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.