ಬ್ರಹ್ಮಾವರ: ಕಳೆದೆರಡು ದಿನಗಳಿಂದ ಪರಿಸರದಲ್ಲಿ ಸುರಿಯುತ್ತಿರುವ ಮಳೆ ಇಳಿಮುಖ ಕಂಡಿದ್ದರೂ, ಘಟ್ಟ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಇಲ್ಲಿನ ನದಿಗಳು ಉಕ್ಕಿ ಹರಿದು ಅನೇಕ ಮನೆಗಳಿಗೆ ನೀರು ನುಗ್ಗಿದೆ. ಪ್ರವಾಹದ ನೀರು ರಸ್ತೆಯಲ್ಲಿ ಹರಿದು ಸಂಚಾರಕ್ಕೆ ಅಡಚಣೆಯಾಯಿತು.
ಮಂಗಳವಾರ ಕೋಟ ಬಳಿಯ ಬನ್ನಾಡಿ, ಬೆಟ್ಲಕ್ಕಿ ಹೊಳೆಕೆರೆ ಪರಿಸರದಲ್ಲಿ ನದಿಗಳು ಉಕ್ಕಿ ಹರಿದು ಅನೇಕ ಮನೆಗಳು ಜಲಾವೃತಗೊಂಡವು. ರಸ್ತೆಗಳ ಮೇಲೆ ನೀರು ಹರಿದು ಕೋಟ– ಸಾಹೇಬರಕಟ್ಟೆ ನಡುವೆ ಸಂಚಾರಕ್ಕೆ ಕೆಲಕಾಲ ವ್ಯತ್ಯಯವಾಗಿತ್ತು.
ಬ್ರಹ್ಮಾವರ ಪರಿಸರದ ಸೀತಾನದಿ, ಮಡಿಸಾಲು ಹೊಳೆ ಉಕ್ಕಿ ಹರಿಯುತ್ತಿದ್ದು, ಅನೇಕ ಕೃಷಿ ಭೂಮಿ ಜಲಾವೃತಗೊಂಡಿವೆ. ಸೋಮವಾರ ನೆರೆ ಇಳಿಮುಖ ಕಂಡಿದ್ದರೂ ರಾತ್ರಿ ಸುರಿದ ಭಾರಿ ಮಳೆಗೆ ಮತ್ತೆ ಪ್ರವಾಹ ಉಂಟಾಗಿತ್ತು. ಎಲ್ಲಿಯೂ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.